ಅಬ್ದುಲ್ ಖಾದರ್ ಕುಡ್ತಮುಗೇರು ಇವರ ಮನೆಗೆ ಇತ್ತೀಚಿಗೆ ಭಾರೀ ಮಳೆಗೆ ಮನೆ ಕುಸಿದ್ದಿದು ಇಲ್ಲಿಗೆ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಇವರು ಬೇಟಿ ನೀಡಿ ಪರಿಶೀಲಿಸಿದರು. ಬಳಿಕ ಕುಡ್ತಮುಗೇರಿನ ಮೀನಿನ ವ್ಯಾಪಾರಿಯಾದ ಅದ್ರಮ ಇವರಿಗೆ ಹೃದಯ ಸಂಬಂಧಪಟ್ಟ ಖಾಯಿಲೆ ಇರುವುದರಿಂದ ಮನೆಗೆ ಬೇಟಿ ನೀಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಕಾಯದರ್ಶಿ ವೇಣುಗೋಪಾಲ, ತಾಲೂಕು ಪಂಚಾಯತ್ ಸದಸ್ಯ ಕುಲ್ಯಾರ್ ನಾರಾಯಣ ಶೆಟ್ಟಿ, ಶಕ್ತಿ ಕೇಂದ್ರ ಪ್ರಮುಖ ರಾಜಾರಾಮ್ ಹೆಗ್ಡೆ, ಪ್ರಶಾಂತ್ ಶೆಟ್ಟಿ ಅಗರಿ, ಯುವ ಮೋರ್ಚಾದ ರೋಹಿತ್ ಅಗರಿ, ಎಸ್.ಟಿ ಮೋರ್ಚಾ ಜಯರಾಮ ಅಗರಿ, ಪ್ರಮುಖರು ಹರೀಶ್ ಶೆಟ್ಟಿ ಕುದ್ರಿಯ, ಪ್ರಶಾಂತ್ ಶೆಟ್ಟಿ ಪೆರ್ಲಬೈಲು, ಸನತ್ ಕುಮಾರ್ ಕಾಡುಮಠ, ಪಂಚಾಯತ್ ಸದಸ್ಯ ಹರೀಶ್ ಟೈಲರ್, ಕೃಷ್ಣಪ್ಪ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

36521315_1037982959688182_783562627912564736_n

By suddi9

Leave a Reply

Your email address will not be published. Required fields are marked *