ಮಂಗಳೂರು: ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರಮಂಟಮೆ ಪುಸ್ತಕ-ಧ್ವನಿಸುರುಳಿ ಬಿಡುಗಡೆಯ ನೇರ ಪ್ರಸಾರದ 18ನೇ ಕಾರ್ಯಕ್ರಮ ಜುಲೈ.7 ರಂದು ಶನಿವಾರ ಬೆಳಿಗ್ಗೆ 10.30 ರಿಂದ 11.30 ಗಂಟೆ ವರೆಗೆ ಪ್ರಸಾರವಾಗಲಿದೆ.

 

Ammer Polisa
ಈ ಕಾರ್ಯಕ್ರಮದಲ್ಲಿ ಸಾನ್ವಿ ಕ್ರಿಯೇಷನ್‍ನವರ ‘ಅಮ್ಮೆರ್ ಪೊಲೀಸ’ ಸಿನಿಮಾದ ಹಾಡುಗಳ ಅನಾವರಣ ಹಾಗೂ ಸಿನೆಮಾ ಕುರಿತು ವಿಶೇಷ ಕಾರ್ಯಕ್ರಮ ಬಿತ್ತರವಾಗಲಿದೆ. ಲಕುಮಿ ಕ್ರಿಯೆಷನ್‍ನ ಲಯನ್ ಕಿಶೋರ್ ಡಿ.ಶೆಟ್ಟಿ, ಚಿತ್ರ ನಿರ್ಮಾಪಕ ಸಾನ್ವಿ ಕ್ರಿಯೇಷನ್‍ನ ರಾಜೇಶ್ ಶೆಟ್ಟಿ, ನಿರ್ದೇಶಕ ಸೂರಜ್ ಶೆಟ್ಟಿ, ನಾಯಕ ನಟ ರೂಪೇಶ್ ಶೆಟ್ಟಿ, ನಾಯಕಿ ನಟಿ ಪೂಜಾ ಶೆಟ್ಟಿ, ವಿಸ್ಮಯ ವಿನಾಯಕ, ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ಡಿ.ಕುನ್ಹಾ, ಕವಯತ್ರಿ ಪಲ್ಲವಿ ಪ್ರಶಾಂತ್ ನರಿಕೊಂಬು, ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ತುಳು ವಿಭಾಗದ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ನಡೆಸಿಕೊಡಲಿದ್ದಾರೆ.

ಕೇಳುಗರು ಅತಿಥಿü ಕಲಾವಿದರ ಜೊತೆ ಸಿನಿಮಾದ ಬಗ್ಗೆ ಸಂವಾದ ಮಾಡಲು (0824) 2211999, ಮೊಬೈಲ್ 8277038000 ದೂರವಾಣಿಗಳನ್ನು ಸಂಪರ್ಕಿಸಬಹುದೆಂದು ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಉಷಾಲತಾ ಸರಪಾಡಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *