ವಿದ್ಯಾರ್ಥಿಗಳು ಒಳ್ಳೆಯ ಕನಸನ್ನು ಕಾಣಬೇಕು, ಮಲಗಿದಾಗ ಬೀಳುವ ಕನಸಲ್ಲದೇ, ಮಲಗಲು ಬಿಡಾಲಾರದ ನಿರಂತರ ಅಧ್ಯಯನದಲ್ಲಿ ತೊಡಗುವಂತೆ ಮಾಡುವ ಕನಸನ್ನು ಕಂಡಾಗ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ವಡಗಾವಿಯ 2018-19 ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘ, ಸಾಂಸ್ಕøತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಪನ್ಯಾಸಕಿ ಜಯಶ್ರೀ ಅಬ್ಬಿಗೇರಿ ಕರೆನೀಡಿದರು. ವಿದ್ಯಾರ್ಥಿಗಳು ಪಠ್ಯವನ್ನು ಬರೀ ಕಂಠಪಾಠ ಮಾಡದೇ ಆಲೋಚನೆ ಮಾಡವುದನ್ನು ಬೆಳೆಸಿಕೊಳ್ಳಬೇಕು. ಮನಸ್ಸು ಆಲೋಚನೆ ಮಾಡುತ್ತದೆ ಎಂದರೆ ಅದು ತನ್ನೋಡನೆ ಮಾತನಾಡುತ್ತದೆ ಎಂಬರ್ಥವಾಗಿದೆ ಎಂದು ಹೇಳಿದರು.

IMG-20180626-WA0022
ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿಯ ಉಪನಿರ್ದೇಶಕರಾದ ಶ್ರೀ. ವ್ಹಿ.ಜಿ. ರಜಪುತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಪಠ್ಯ, ಸಹಪಠ್ಯ ಚಟುವಟಿಕೆಗಳ ಜೊತೆಗೆ ಓದಿನ ಕಡೆಗೂ ಮಹತ್ವ ನೀಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ 2017-18 ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಕು.ಸೋನಿಯಾ ಪಿ.ಹೊಗಾಡೆ, ಕು. ಕಾವ್ಯ ಕೃಷ್ಣ ಸುಳ್ಳದ, ಕು. ಅನ್ನಪೂರ್ಣಾ ರಾವಳ, ಸೂರಜ ಶೇಠ ಇವರುಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕಾಲೇಜು ಅಭಿವೃಧ್ಧಿ ಸಮಿತಿಯ ಉಪಾದ್ಯಕ್ಷರು ಹಾಗೂ ನಗರ ಸೇವಕರಾದ ಶ್ರೀ ರಮೇಶ ಸೊಂಟಕ್ಕಿ, ಹಾಗೂ ಶ್ರೀ ದೀಪಕ ಜಮಖಂಡಿ, ಹಿಂದಿನ ಪ್ರಾಚಾರ್ಯರಾದ ಡಿ.ಪಿ.ಕೋಳಿ, ಎನ್.ಬಿ.ಶಿರಶ್ಯಾಡ, ಉಪನ್ಯಾಸಕರುಗಳಾದ ರಾಜೇಶ ನಾಯಕ ಶ್ರೀ.ಬಸವರಾಜ ಮುರಗೋಡ ಶ್ರೀಮತಿ ಛಾಯಾ ಮೋರೆ, ಶ್ರೀ. ಎಸ್.ಎಸ್.ಚಾಳೇಕರ, ಎಮ್.ಬಿ.ಮುಜಾವರ, ಶ್ರೀಮತಿ ವಂದನಾ ಶೇಠ ಶ್ರೀಮತಿ ರೂಪಾ ಜಾಧವ ಉಪಸ್ಥತರಿದ್ದರು, ಪ್ರಾಚಾರ್ಯ ಶ್ರೀ. ಚಂದ್ರಕಾಂತ. ಎಸ್. ರಾಮದುರ್ಗ ಅಧ್ಯಕ್ಷತೆ ವಹಿಸಿದ್ದರು, ಶ್ರೀ. ಎಂ.ಎಸ್. ಸಜ್ಜನ ಸ್ವಾಗತಿಸಿ, ಉಪನ್ಯಾಸಕ ಎಸ್,ಕೆ,ಅಮಟೆ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರೆ, ಶ್ರೀ.ಬಸವರಾಜ ಮುರಗೋಡ ವಂದಿಸಿದರು ಹಾಗೂ ಡಾ.ನಾಗರಾಜ ಮರೆಣ್ಣವರ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *