ಮಂಗಳೂರು: ಎ.ಜೆ. ಆಸ್ಪತ್ರೆಯ ಸಂಶೋಧನ ವಿಭಾಗದ ಪ್ರೊಫೆಸರ್ ಡಾ|| ಸುಫಲಾ ಕೋಟ್ಯಾನ್ ಮಾರ್ಗದರ್ಶನದಲ್ಲಿ, ಕೊಯಂಬತ್ತೂರು ಭಾರತೀಯರ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದ ಸ್ಕೂಲ್ ಆಪ್ ಸೋಶಿಯಲ್ ವರ್ಕ್ ಕಾಲೇಜು ರೋಶನಿ ನಿಲಯ ಸಮಾಜ ಕಾರ್ಯ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ವಿದ್ಯಾ ನಾಗರಾಜ್ ಮದ್ದೋಡಿ ರವರಿಗೆ ವಿದ್ಯಾರ್ಥಿಗಳಿಂದ, ಅವರ ಮನೆಯಂಗಳದಲ್ಲಿ ಅಭಿನಂದನಾ ಸಮಾರಂಭ ನಡೆಯಿತು.

ಶಿಕ್ಷಕರನ್ನು ವಿದ್ಯಾರ್ಥಿಗಳು ಸಮ್ಮಾನಿಸುವುದು ಒಂದು ಪರಂಪರೆಯನ್ನು ಗೌರವಿಸಿದಂತೆ, ಗುರು ಶಿಷ್ಯರ ಸಂಬಂಧ ಬಹಳ ಶ್ರೇಷ್ಠವಾದದ್ದು, ಅದನ್ನು ಉಳಿಸಿ ಬೆಳೆಸಿದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಕವಿ, ಲೇಖಕರು ಹಾಗೂ ಚೈಲ್ಡ್‍ಲೈನ್ ನಗರ ಸಂಯೋಜಕರಾದ ಯೋಗೀಶ್ ಮಲ್ಲಿಗೆಮಾಡು ಕಾರ್ಯಕ್ರಮದಲ್ಲಿ ಮಾತನ್ನಾಡಿದರು.
ಸನ್ಮಾನದ ಮೂಲಕ ವಿದ್ಯಾರ್ಥಿಗಳು ಅಭಿನಂದಿಸಿರುವುದು ಅತ್ಯಂತ ಸಂತೋಷವಾಗಿದೆ, ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರ ಮೂಲಕ ಕೇವಲ ವಿದ್ಯಾರ್ಥಿಗಳು ಮಾತ್ರ ಬೆಳೆಯುವುದಲ್ಲ, ಶಿಕ್ಷಕರು ಕೂಡ ಉನ್ನತ್ತ ಮಟ್ಟಕ್ಕೆ ಏರುತ್ತಾರೆ, ಅದು ಗುರು-ಶಿಷ್ಯರಲ್ಲಿ ಉತ್ತಮ ಬಾಂಧವ್ಯತೆ ಇದ್ದಾಗ ಮಾತ್ರ ಸಾಧ್ಯ ಎಂದು ಸನ್ಮಾನ ಸ್ವೀಕರಿಸಿದ ಪ್ರೊಫೆಸರ್ ವಿದ್ಯಾ ನಾಗರಾಜ್ ಮದ್ದೋಡಿ ಹೇಳಿದರು.
ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತರಾದ ನಾಗರಾಜ್ ಪಣಕಜೆ ನಿರೂಪಿಸಿ, ಕಾಲೇಜು ವಿದ್ಯಾರ್ಥಿನಿಯರಾದ ಕು|| ಕೀರ್ತನಾ ನಿಕೋಲ್ಸನ್ ಸ್ವಾಗತಿಸಿ, ಕು|| ಶ್ರೀನಿಧಿ.ಜಿ. ವಂದಿಸಿದರು.
