ವಾಮಂಜೂರು: ಮಹಾತ್ಮಾಗಾಂಧೀಜಿಯವರ ಸರ್ವೋದಯದತತ್ವದಂತೆ ವಿದ್ಯಾರ್ಥಿಗಳು ಜೀವನಾನುಭವದೊಂದಿಗೆರಾಷ್ಟ್ರದ ಶ್ರೆಯೋಭಿವೃದ್ಧಿಗಾಗಿದೃಢ ಸಂಕಲ್ಪತೊಡಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದಕನ್ನಡ ಪ್ರಾದ್ಯಾಪಕರೂ, ಪ್ರಸಾರಾಂಗ ಸಹ ನಿರ್ದೇಶಕ ಡಾ| ಧನಂಜಯ ಕುಂಬ್ಳೆ  ಹೇಳಿದರು.IMG-20180628-WA0030 (1)

ಅವರು ವಾಮಂಜೂರಿನ ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು 2018-19ನೇ ಶೈಕ್ಷಣಿಕ ಸಾಲಿನ ಎನ್ನೆಸ್ಸಸ್‍ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು, ಪಿ.ಯು.ಸಿ ಹಂತ ವಿದ್ಯಾರ್ಥಿಗಳಿಗೆ ಪರ್ವಕಾಲ. ಈ ಹಂತದಲ್ಲಿ ಶೈಕ್ಷಣಿಕಅಭ್ಯಾಸದಜೊತೆಗೆಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಭಾಗದ ಐ.ಸಿ.ವೈ.ಎಂ ಸಹಾಯಕನಿರ್ಧೇಶಕರಾದ ವ| ಫಾ| ಅಶ್ವಿನ್ ಕರ್ಡೋಜಾರವರು ಮಾತನಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ನಾಯಕತ್ವಗುಣ ರೂಢಿಸಿಕೊಳ್ಳಲು ಎನ್ನೆಸ್ಸೆಸ್ ಸಹಕಾರಿಎಂದು ನುಡಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನುಸೈಂಟ್‍ರೇಮಂಡ್ಸ್‍ಪ್ರಥಮದರ್ಜೆಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಸಗಾಯ ಸೆಲ್ವಿ ವಹಿಸಿದ್ದರು. ಪಿ.ಯು.ಸಿ ವಿಭಾಗದ ಪ್ರಾಂಶುಪಾಲರಾದ ಭಗಿನಿ ಸಾಧನಾಅತಿಥಿಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಅವಿಲ್‍ರೆನಿಲ್ ಡಿಸಿಲ್ವಾ ಈ ಸಂದರ್ಭ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸುಝಾನಕಾರ್ಯಕ್ರಮ ನಿರೂಪಿಸಿದರು. ಶ್ರೇಯಾವಂದಿಸಿದರು.

By suddi9

Leave a Reply

Your email address will not be published. Required fields are marked *