ಮಂಗಳೂರು:ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸುವುದು ಸುಲಭವಲ್ಲ. ಅತ್ಯಲ್ಪ ವೇತನದಲ್ಲಿ ಪುಟ್ಟ ಮಕ್ಕಳಿಗೆ ತಾಯಿ ಪ್ರೀತಿ ನೀಡುವ ಸಹಾಯಕಿಯರು ನಿವೃತ್ತರಾದಾಗ ಅವರ ಸೇವೆ ಸ್ಮರಿಸುವುದು ಮುಖ್ಯ ಎಂದು ಪಾವೂರು ಪಂಚಾಯತ್ ಉಪಾಧ್ಯಕ್ಷೆ ಲೀಲಾವತಿ ನಾಟ್ರಕೋಡಿ ಹೇಳಿದರು.7ule4

ಪಾವೂರು ಕಂಬಳಪದವು ಮಿನಿ ಅಂಬೇಡ್ಕರ್ ಭವನದಲ್ಲಿ ಪಾವೂರು ಗ್ರಾಮದ ಕಂಬಳಪದವು ಅಂಗನವಾಡಿ ಕೇಂದ್ರದಲ್ಲಿ 24 ವರ್ಷ ಸಹಾಯಕಿಯಾಗಿ ಸೇವೆ ಸಲ್ಲಿಸಿದ ಲಕ್ಷ್ಮೀ ನಾರಾಯಣ್ ಅವರಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾವೂರು ಗ್ರಾಮ ಪಂಚಾಯತ್ ಸದಸ್ಯ ಹುಸೈನ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಸುನಿತಾ ಲೋಬೋ, ಐ.ಬಿ.ಸಾದಿಕ್, ಜೆಸಿಂತ ಲೋಬೋ, ಸ್ತ್ರೀ ಶಕ್ತಿ ಗುಂಪಿನ ಹಿರಿಯ ಸದಸ್ಯೆ ನೂರ್ ಜಹಾನ್, ಅಂಗವಾಡಿ ಕಾರ್ಯಕರ್ತೆಯರಾದ ಶಾಲಿನಿ, ಪವಿತ್ರ, ಜೆಸಿಂತಾ ಲೋಬೊ ಮುಖ್ಯ ಅತಿಥಿಗಳಾಗಿದ್ದರು.

ಕಂಬಳಪದವು ಅಂಗನವಾಡಿ ಕಾರ್ಯಕರ್ತೆ ಸರಸ್ವತಿ, ಸ್ತ್ರೀ ಶಕ್ತಿ ಸದಸ್ಯೆ ಜಯಂತಿ, ಆಶಾ ಕಾರ್ಯಕರ್ತೆ ಪ್ರಮೀಳಾ ಒಡನಾಟ ಹಂಚಿಕೊಂಡರು. ಅಂಗನವಾಡಿ ಕಾರ್ಯಕರ್ತೆ ಫಾತಿಮಾ ಸ್ವಾಗತಿಸಿದರು. ಜೆಸಿಂತಾ ಲೋಬೋ ವಂದಿಸಿದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *