ಕೈಕಂಬ: ನಮ್ಮ ಪೂರ್ವಜರು ಮಣ್ಣಿನಲ್ಲೇ ದುಡಿಯುತ್ತಿದ್ದರು. ಮಣ್ಣಿನಲ್ಲಿ ಔಷದೀಯ ಗುಣವಿದ್ದು, ಇದರಿಂದ ಅನೇಕ ಚರ್ಮರೋಗಗಳು ನಿವಾರಣೆಯಾಗುತ್ತವೆ. ಇಂದಿನ ಕಾಲದಲ್ಲಿ ಕೃಷಿ ಪದ್ಧತಿಯು ಕಡಿಮೆಯಾಗುತ್ತಿದೆ ಎಂದು ಲಯನ್ ಡಾ| ಗೀತಾ ಪ್ರಕಾಶ್ ವಿಷಾದ ವ್ಯಕ ್ತಪಡಿಸಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಮಂಗಳೂರು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ನೀರುಮಾರ್ಗ ವಲಯ, ಲಯನ್ಸ್ ಕ್ಲಬ್ ಮಂಗಳೂರು-ಕಾವೂರು, ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್ (ರಿ.) ಉಳಾಯಿಬೆಟ್ಟು, ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ಭಜನಾ ಸೇವಾ ಸಮಿತಿ ಉಳಾಯಿಬೆಟ್ಟು ಇವರ ಜಂಟಿ ಆಶ್ರಯದಲ್ಲಿ ತುಳುವೆರೆ ಕೂಟ ಕೆಸರ್ದ ಗೊಬ್ಬುಲು-2018 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಿತು.

ತುಳು ಭಾಷೆ, ಸಂಸ್ಕøತಿ ಬಹಳ ಪುರಾತನವಾಗಿದ್ದು, ತುಳು ಭಾಷೆ, ಸಂಸ್ಕøತಿ ಹಾಗೂ ಪಾರ್ದನಗಳನ್ನು ಇಂಗ್ಲೀಷ್ನಲ್ಲಿ ಭಾಷಾಂತರಿಸಿ, ಈ ಬಗ್ಗೆ ವಿದೇಶಗಳಲ್ಲಿ ಅಧ್ಯಯನ ನಡೆಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ತುಳುನಾಡ ಸಂಸ್ಕತಿ ಇಂತಹ ಕ್ರೀಡೆಗಳಿಂದ ಉಳಿಯುವಂತಾಗಲಿಎಂದು ಯೋಜನಾಧಿಕಾರಿ ಉಮರಬ್ಬ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ವಸಂತ್ ಕುಮಾರ್ ಪೆರ್ಮಂಕಿ ವಹಿಸಿದ್ದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಕಾವೂರು ಇದರ ಅಧ್ಯಕ್ಷರಾದ ಸತೀಶ್ ಶೆಟ್ಟಿ ಕಡಂಬಿಲ, ಮೊಕ್ತೇಸರರಾದ ಶ್ರೀನಿವಾಸ ಮಾಣೈ ಮಾಂಜ, ಸತೀಶ್ ಶೆಟ್ಟಿ ಮೂಡುಜಪ್ಪÅಗುತ್ತು, ಪಂಚಾಯತ್ ಉಪಾಧ್ಯಕ್ಷರಾದ ಸೌಮ್ಯ ಪಂಡಿತ್, ವಲಯ ಅಧ್ಯಕ್ಷರಾದಶ್ರೀಧರ್ ತಲ್ಲಿಮಾರ್, ಭಾಗೇಶ್ವರಿ ಸತೀಶ್ ಶೆಟ್ಟಿ, ದಿವಾಕರ ತಲ್ಲಿಮಾರು, ಮೇಲ್ವಿಚಾರಕರಾದ ಸಂಪತ್ ಕುಮಾರ್, ಸೇವಾಪ್ರತಿನಿಧಿ ಸುರೇಶ್ ಅರಂತಕೋಡಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಮಾತನಾಡಿದ ರಾಜೀವ ಶೆಟ್ಟಿ ಸಲ್ಲಾಜೆ ಸ್ವಾಗಗತಿಸಿದರು. ಸಂಧ್ಯಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಕೊಟ್ಟಾರಿ ಅಡ್ಯಾರ್ ವಂದಿಸಿದರು.
ಬಳಿಕ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆಯನ್ನು ಕೆಸರಿನಲ್ಲಿ ನಡೆಸಲಾಯಿತು. ಕೆಸರಿನಲ್ಲಿ ಓಟ, ಎತ್ತಿನ ಬಂಡಿ, ಹಗ್ಗ ಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆ, ತ್ರೋಬಾಲ್, ವಾಲಿಬಾಲ್, ನಿಧಿ ಹುಡುಕುವ ಸ್ಪರ್ಧೆ ನಡೆಸಲಾಯಿತು. ತುಳುನಾಡಿನ ಖಾದ್ಯಗಳಾದ ಪತ್ರಡ್ಯೆ, ಹಲಸಿನ ಗಟ್ಟಿ ಹಾಗೂ ಇತರ ತಿಂಡಿತಿನಿಸುಗಳನ್ನು ನೀಡಲಾಯಿತು.
