ವಾಮಂಜೂರು: ನವಭಾರತ ನಿರ್ಮಾಣದ ರೂವಾರಿಗಳಾದ ವಿದ್ಯಾರ್ಥಿಗಳು ಎಳವೆಯಲ್ಲಿಯೇ ನಾಯಕತ್ವಗುಣ, ಸೃಜನಾತ್ಮಕ, ಕ್ರಿಯಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿಇಲ್ಲಿನಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿ ಸಂಸತ್ತು, ಎನ್ನೆಸ್ಸಸ್ ಹಾಗೂ ವಿವಿಧ ಕ್ಲಬ್‍ಗಳ ರಚನೆ, ಉದ್ಘಾಟನೆ ಸಂಸದೀಯ ಮಾದರಿಯಲ್ಲಿ ನೆರವೇರಿತು.

ಉದ್ಘಾಟನೆಯನ್ನು ಐಸಿವೈಎಮ್ ಸಹಾಯಕ ನಿರ್ಧೇಶಕರಾದ ವ ಫಾ ಅಶ್ವಿನ್ ಕರ್ಡೋಜಾ ಉದ್ಘಾಟಿಸಿ ಆಶೀರ್ವಚನವಿತ್ತರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಹಾಯಕ ನಿರ್ಧೇಶಕರೂ, ಪ್ರಾಧ್ಯಾಪಕರೂ ಆದ ಡಾ.ಧನಂಜಯಕುಂಬ್ಳೆರವರು, ಪ್ರತಿಯೊಬ್ಬರೂ ಮಹಾತ್ಮಾಗಾಂಧೀಜಿಯವರ ಸರ್ವೋದಯತತ್ವದಂತೆ ಸೇವಾಮನೋಭಾವ ಬೆಳೆಸಿಕೊಂಡು ರಾಷ್ಟ್ರದಅಭ್ಯುದಯಕ್ಕಾಗಿದುಡಿಯಬೇಕೆಂದುಕರೆ ನೀಡಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನುಸೈಂಟ್‍ರೇಮಂಡ್ಸ್‍ಪ್ರಥಮದರ್ಜೆಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಸಗಾಯ ಸೆಲ್ವಿ ವಹಿಸಿದ್ದರು . ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಭಗಿನಿ ಸಾಧನಾ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಸಭಾಕಾರ್ಯಕ್ರಮದ ನಂತರಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕಕಾರ್ಯಕ್ರಮ ಸಂಪನ್ನಗೊಂಡವು. ವಿದ್ಯಾರ್ಥಿನಿಯರಾದ ಸುಝಾನ, ಶ್ರೇಯಾಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ನಾಯಕಿಚೈತ್ರ ವಂದಿಸಿದರು
