ಕೈಕಂಬ :ಸರಕಾರಿ ಪದವಿ ಪೂರ್ವಕಾಲೇಜು, ಗುರುಪುರ, ಈ ವಿದ್ಯಾಸಂಸ್ಥೆಯಲ್ಲಿ 23 ವರ್ಷ ಉಪನ್ಯಾಸಕರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ, ಉಪನ್ಯಾಸಕಿ ಅನುಸೂಯ ಕೆ ಪಿ ಇವರು ಇದೇ ತಾಲ್ಲೂಕಿನ ಸರಕಾರಿ ಪದವಿ ಪೂರ್ವಕಾಲೇಜು, ಮುತ್ತೂರು ಈ ಕಾಲೇಜಿಗೆ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿರುತ್ತಾರೆ.ಇವರಿಗೆ ಕಾಲೇಜಿನ ಪ್ರಾಂಶುಪಾಲರಾದ ವಾಸುದೇವಕಾಮತ್ ಮತ್ತುಸಹ-ಉಪನ್ಯಾಸಕರು ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಾರೆ. ಅವರು ತೋರಿದ ಪ್ರೀತಿ-ವಾತ್ಸಲ್ಯ, ಸ್ನೇಹ, ಸೇವೆಯಲ್ಲಿನತಲ್ಲೀನತೆ ಅವರಿಗೆ ಸರಕಾರಿ ಸೇವೆಯಲ್ಲಿಯಶಸ್ಸನ್ನು ಮತ್ತುಜೀವನದಲ್ಲಿಉತ್ತಮಆರೋಗ್ಯ, ಸಕಲ ಸಂಪತ್ತನ್ನು ತಂದುಕೊಡಲಿ ಎಂದು ಈ ಮೂಲಕ ಹಾರೈಸುತ್ತೇವೆ.

