ಕೈಕಂಬ:ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2018-19 ನೆ ಸಾಲಿನ ಕಂಪ್ಯೂಟರ್ ಕ್ಲಬ್‍ನ್ನು ಜು.18 ರಂದು ಪ್ರಾರಂಭಿಸಲಾಯಿತು. ಕೆ.ಪಿ. ಶ್ರೀನಿವಾಸ್ ಪಿಯುಸಿ ಪಠ್ಯಪುಸ್ತಕ ಸಮಿತಿ ಸದಸ್ಯರು ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರು ಸರ್ಕಾರಿ ಮಹಿಳಾ ಕಾಲೇಜು ಬಲ್ಮಠ ಇವರು ಕಬ್ಲ್‍ನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಕಾಲೇಜಿನಲ್ಲಿರುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಾಗೂ ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಸೈನ್ಸ್‍ನ ಮಹತ್ವವನ್ನು ವಿವರಿಸಿದರು.

000

28vp club udghatane ಬಾಲಕೃಷ್ಣ ಡಿ. ಜೀವಶಾಸ್ತ್ರ ಉಪನ್ಯಾಸಕರು, ಸ.ಮಹಿಳಾ ಪ ಪೂ. ಕಾಲೇಜು ಬಲ್ಮಠ ಇವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಅಧ್ಯಕ್ಷತೆ ವಹಿಸಿದ್ದ ಗುರುಪುರ ಸ.ಪ.ಪೂ.ಕಾಲೇಜಿನ ಪ್ರಾಚಾರ್ಯರಾದ ವಾಸುದೇವ ಕಾಮತ್ ಕೆ. ಮಾತನಾಡಿ ತಮ್ಮ ಸಂಸ್ಥೆಯ ಎಲ್ಲಾ ಸಂಪನ್ಮಾಲಗಳನ್ನು ಬಳಸಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು. ವಿದ್ಯಾರ್ಥಿನಿ ಲಿಖಿತ ಕಾರ್ಯಕ್ರಮ ನಿರೂಪಿಸಿ, ಶ್ವೇತ ಕಾರ್ಯಕ್ರಮ ಸ್ವಾಗತಿಸಿ, ನಿಖಿಲ್ ಕಾರ್ಯಕ್ರಮ ವಂದಿಸಿದರು. ವಿದ್ಯಾರ್ಥಿಗಳು ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.

By suddi9

Leave a Reply

Your email address will not be published. Required fields are marked *