ಬಂಟ್ವಾಳ:ಇಲ್ಲಿನ ಬೈಪಾಸ್ ತುಂಬೆ ಜಂಕ್ಷನ್ ಎಂಬಲ್ಲಿ ಕಳೆದ 10ರಂದು ರಾತ್ರಿ 9.15ಗಂಟೆಗೆ ದುರ್ಗಾ ಮೆನ್ಸ್ ಪಾರ್ಲರ್ ಎಂಬ ಸೆಲೂನಿಗೆ ನುಗ್ಗಿ ದಾಂಧಲೆ ನಡೆಸಿ ಅಲ್ಲಿನ ಕ್ಷೌರಿಕ ದೀಕ್ಷಿತ್ ಎಂಬ ಯುವಕನಿಗೆ ಬಾಟಲಿಯಿಂದ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.
ಆರೋಪಿಗಳನ್ನು ಪಲ್ಲಮಜಲು ನಿವಾಸಿ ಸಂಜೀವ ಶೆಟ್ಟಿ ಎಂಬವರ ಪುತ್ರ ಭುವಿತ್ ಶೆಟ್ಟಿ, ಮೊಡಂಕಾಪು ನಿವಾಸಿ ಕಾಂತಪ್ಪ ಪೂಜಾರಿ ಎಂಬವರ ಪುತ್ರ ವಸಂತ ಕುಮಾರ್, ಅಜ್ಜಿಬೆಟ್ಟು ನಿವಾಸಿ ದಿವಂಗತ ವೆಂಕಟರಮಣ ಎಂಬವರ ಪುತ್ರ ಕಮಲಾಕ್ಷ, ಮಿತ್ತಬೈಲು ನಿವಾಸಿ ದಿವಂಗತ ಸೋಮಪ್ಪ ಪೂಜಾರಿ ಎಂಬವರ ಪುತ್ರ ಜೀತು ಯಾನೆ ಜಿತೇಂದ್ರ, ಸಂಚಯಗಿರಿ ನಿವಾಸಿ ಸಂಜೀವ ಕುಲಾಲ್ ಎಂಬವರ ಪುತ್ರ ಅಭಿಜಿತ್ ಎಂದು ಗುರುತಿಸಲಾಗಿದೆ.

ಇವರೆಲ್ಲರೂ ಅಂದು ರಾತ್ರಿ ಸೆಲೂನಿನಲ್ಲಿ ರೂ 10ಸಾವಿರ ಮೌಲ್ಯದ ಮೊಬೈಲ್ ಕಿತ್ತುಕೊಂಡು ಕಲ್ಲಿನಿಂದ ಸೆಲೂನಿನ ಅಂಗಡಿ ಕಿಟಕಿ ಗಾಜು , ಕುರ್ಚಿ ಮತ್ತಿತರ ಸಾಮಾಗ್ರಿ ಪುಡಿ ಮಾಡಿ ಹಾನಿ ಉಂಟು ಮಾಡಿ ಜೀವ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಸಲಾಗಿತ್ತು
ಎಸ್ಪಿ ರವಿಕಾಂತೇಗೌಡ ಮತ್ತು ಡಿವೈಎಸ್ಪಿ ಕುಮಾರ್ ನಿರ್ದೇಶನದಂತೆ ಇನ್ಸ್ಪೆಕ್ಟರ್ ಪ್ರಕಾಶ್, ನಗರ ಠಾಣಾಧಿಕಾರಿ ಚಂದ್ರಶೇಖರ್ ಎಚ್.ವಿ., ಕ್ರೈಂ ಎಸೈ ಹರೀಶ್ ಎಂ.ಆರ್., ಉಪ್ಪಿನಂಗಡಿ ಠಾಣಾಧಿಕಾರಿ ನಂದಕುಮಾರ್, ಸಂಚಾರಿ ಠಾಣಾಧಿಕಾರಿ ಯಲ್ಲಪ್ಪ, ಸಿಬ್ಬಂದಿಗಳಾದ ಎಚ್.ಸಿ.ಸುರೇಶ, ಮುರುಗೇಶ, ಉದಯ ಕುಮಾರ್, ಜಗದೀಶ, ಉಮೇಶ, ಮಲ್ಲಿಕ್ ಸಾಬ್, ಜಮೀರ್, ಅವಿನಾಶ್, ಕೇದಾರ, ಪ್ರಶಾಂತ, ಮೋಹನ, ಬಸವರಾಜ್, ಪರಮೇಶ, ಸಂಪತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.
