ಪೊಳಲಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಕಮರಿಗೆ ಉರುಳಿ ಬಿದ್ದ ಘಟನೆ ಭಾನುವಾರ ಕಲ್ಲಗುಡ್ಡೆ ಎಂಬಲ್ಲಿ ನಡೆದಿದೆ. ಬಿಸಿರೋಡು ಕಡೆಯಿಂದ ಪೊಳಲಿ ಕೈಕಂಬ ಮಾರ್ಗವಾಗಿ ಬರುತ್ತದ್ದ ಮಾರುತಿ ರಿಟ್ಜ್ ಕಾರು ಚಾಲಕನ ನಿಯಂತ್ರಣ ತಪ್ಪಿ ಕಲ್ಲಗುಡ್ಡೆ ಸಮೀಪದ ಡೊಮೆನಿಕ್ ಶಾಲೆಯ ಹತ್ತಿರ ಕಮರಿಗೆ ಬಿದ್ದಿದೆ. ಚಾಲಕ ಪಾಣೆಮಂಗಳೂರಿನ ಖಲೀಲ್ ಎಂಬಾತ ಪ್ರಾಣಾಪಯದಿಂದ ಪಾರಾಗಿದ್ದಾನೆ.
