ಸೈಂಟ್ ರೀಟಾ ವಿದ್ಯಾ ಸಂಸ್ಥೆ ವಿಟ್ಲ, ಇಲ್ಲಿನ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು, ಶಾಲೆಯ ಹಳೆ ವಿದ್ಯಾರ್ಥಿ, ಹಿತೈಷಿ ಹಾಗೂ ಕೊಡುಗೈ ದಾನಿಯಾಗಿರುವ ಶ್ರೀ ಮ್ಯಾಕ್ಷಿಮ್ ಕ್ರಾಸ್ತ ಇವರು, ಅವರ ತಾಯಿ ಶ್ರೀಮತಿ ಎಲಿಜಾಕ್ರಾಸ್ತ, ಕಾಯರ್ಮಾರ್ ಅವರ ಹೆಸರಲ್ಲಿ, ಸುಮಾರು ರೂ. 70,000 ಮೌಲ್ಯದ ವಾಟರ್ ಕೂಲರ್ನ್ನು ದಾನವಾಗಿ ಕೊಟ್ಟಿರುತ್ತಾರೆ. ಶಾಲಾ ಸಂಚಾಲಕರಾದ ವಂ. ಫಾ. ಎರಿಕ್ ಕ್ರಾಸ್ತ ಮುಖ್ಯ ಶಿಕ್ಷಕರಾದ ವಂ. ಫಾ. ಲ್ಯಾನ್ಸಿ ಸಲ್ಡಾನ್ಹಾ, ಸಿಸ್ಟರ್ ಮರೀನಾ ಹಾಗೂ ಶ್ರೀ ಸಿಪ್ರಿಯನ್ ಕ್ರಾಸ್ತ ಅವರ ಸಮಕ್ಷಮದಲ್ಲಿ ಹಸ್ತಾಂತರಿಸಲಾಯಿತು.

