ಕೈಕಂಬ : ಆಯುಷ್ ಮಂತ್ರಾಲಯ(ಭಾರತ ಸರ್ಕಾರ), ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆ(ದಿಲ್ಲಿ), ಆಯುಷ್ ಇಲಾಖೆ(ಕರ್ನಾಟಕ ಸರ್ಕಾರ), ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ(ಉಜಿರೆ), ಧರ್ಮಸ್ಥಳದ ಶಾಂತಿವನ ಟ್ರಸ್ಟ್(ರಿ) ಹಾಗೂ ಶ್ರೀ ಪದ್ಮಸಾಯಿ ನ್ಯಾಯ ವಿಜ್ಞಾನ ಶಿಕ್ಷಣ ಚಿಕಿತ್ಸಾ ಪ್ರತಿಷ್ಠಾನ(ಗುರುಪುರ) ಜಂಟಿ ಆಶ್ರಯದಲ್ಲಿ ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಗೃಹದಲ್ಲಿ ಆರಂಭಗೊಂಡಿದ್ದ 21 ದಿನಗಳ `ಉಚಿತ ಯೋಗ ಶಿಬಿರ’ `ವಿಶ್ವ ಯೋಗ ದಿನ’ವಾದ ಜೂನ್ 21ರಂದು ಸಮಾಪನಗೊಂಡಿತು.21vpgurupura yoga1

ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಯೋಗ ತರಬೇತುದಾರರಾಗಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಕೌಶಿಕ್ ಮಾತನಾಡುತ್ತ, “ಯೋಗಕ್ಕೆ ದೇಹವನ್ನು ಬಲವಂತವಾಗಿ ಒಗ್ಗಿಸಿಕೊಳ್ಳಬಾರದು. ಪ್ರಶಾಂತ ಮನಸ್ಥಿತಿಯಲ್ಲಿ ಯೋಗ ಅಭ್ಯಾಸ ಮಾಡಬೇಕು. ಯೋಗದಲ್ಲಿ ಉಸಿರಾಟಕ್ಕೆ ಪ್ರಾಧಾನ್ಯತೆ ಹೆಚ್ಚು” ಎಂದರು.21vpgurupura yoga3

ಶಿಬಿರಾರ್ಥಿಗಳ ಪರವಾಗಿ ಬೆಸೆಂಟ್ ಕಾಲೇಜಿನ ನಿವೃತ್ತ ಉಪನ್ಯಾಸಕ ಮಾತಾಡಿ, “ಯೋಗದಿಂದ ದೈಹಿಕ ಅನಾರೋಗ್ಯ ನಿಯಂತ್ರಿಸಬಹುದೆಂದು ನಾನು ಕಂಡುಕೊಂಡಿದ್ದೇನೆ. ಎಲ್ಲರೂ ತಮ್ಮ ಜೀವನದ ಅವಿಭಾಗ್ಯ ಅಂಗವಾಗಿ ಯೋಗ ಸ್ವೀಕರಿಸಬೇಕು” ಎಂದು ಹೇಳಿದರು.21vpgurupura yoga2

ಈ ಸಂದರ್ಭದಲ್ಲಿ ಡಾ. ಕೌಶಿಕ್ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಶ್ರೀ ಪದ್ಮಸಾಯಿ ನ್ಯಾಯ ವಿಜ್ಞಾನ ಶಿಕ್ಷಣ ಚಿಕಿತ್ಸಾ ಪ್ರತಿಷ್ಠಾನದ ಪರವಾಗಿ ಸುರತರಾಜ್ ಶೆಟ್ಟಿ ಶಿಬಿರ ವ್ಯವಸ್ಥೆಗೊಳಿಸಿದ್ದಾರೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದ ಜಿ. ಲಕ್ಷ್ಮಣ್ ಶೆಟ್ಟಿ ವಂದನಾರ್ಪಣೆಗೈದರು.

By Suddi9

Leave a Reply

Your email address will not be published. Required fields are marked *