ಮಂಗಳೂರು: ವಿಧಾನಸಭಾ ಚುನಾವಣೆ ವೇಳೆ ವರ್ಗಾವಣೆಗೊಂಡಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಅವರು ಮತ್ತೆ ಅಧಿಕಾರ ಸ್ವೀಕರಿಸಿದರು.
ಸುರೇಶ್ ಅವರು ನಿರ್ಗಮನ ಪೊಲೀಸ್ ಆಯುಕ್ತರಾಗಿರುವ ವಿಫುಲ್ ಕುಮಾರ್ ಅವರಿಂದ ಅಧಿಕಾರಿ ಸ್ವೀಕರಿಸಿದರು.
ನಿರ್ಗಮನ ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಅವರು ಮಾತನಾಡಿ, ಮಂಗಳೂರಿನ ಜನರು ಶಾಂತಿ ಪ್ರಿಯರು ಎಂದು ಪ್ರಶಂಸೆ ಮಾಡಿದರು.
ಕೆಲವು ಸಮಾಜದ್ರೋಹಿಗಳಿಂದಾಗಿ ಮಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ಆದರೆ ಇಲ್ಲಿನ ಹೆಚ್ಚಿನ ಜನರು ಶಾಂತಿಪ್ರಿಯರು ಎಂದರು.

