ಮಂಗಳೂರು: ಕಾರು ಹಾಗೂ ಬೈಕ್ ಮುಖಾಮುಖಿ ಢಿಕ್ಕಿ ಹೊಡೆದ ಬೈಕ್ ಸವಾರ ಮೃತಪಟ್ಟಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ರಾ.ಹೆ.66ರಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ತಲಪಾಡಿಯ ತಚ್ಚಣಿ ನಿವಾಸಿ ಮನೋಹರ್ ಬೆಳ್ಚಾಡ (50) ಎಂದು ಗುರುತಿಸಲಾಗಿದೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇವರು ಇತ್ತೀಚಿಗೆ ಊರಿಗೆ ಆಗಮಿಸಿದ್ದರು. ಅಲ್ಲದೆ ತನ್ನ ಹೊಸ ಮನೆಯ ಗೃಹಪ್ರವೇಶ ಎರಡು ದಿನಗಳ ಹಿಂದಷ್ಟೇ ನಡೆಸಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಉಳ್ಳಾಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

