DSC_0923

ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಶ್ರೀ ಮಹಾವೀರ ಬಸದಿಯಲ್ಲಿ  ಜೈನ ಮುನಿಗಳಾದ 108 ಶ್ರೀ ವೀರಸಾಗರ ಮಹಾರಾಜ್‍ರವರನ್ನು ಬಂಟ್ವಾಳದ ಶಾಸಕ ರಾಜೇಶ್‍ ನಾಯ್ಕ್ ಉಳಿಪ್ಪಾಡಿಯವರು ಭೇಟಿಯಾಗಿ ಪೂಜ್ಯ ಸ್ವಾಮಿಜಿಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಬಂಟ್ವಾಳ ಜೈನ ಸಮಾಜದ ವತಿಯಿಂದ ಶ್ರೀಗಳು ಶಾಸಕ ರಾಜೇಶ್ ಅವರನ್ನು ಸನ್ಮಾನಿಸಿ,  ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಶ್ರಮಿಸುವಂತೆ ಶಾಸಕರಿಗೆ ಪೂಜ್ಯ ಕರೆ ನೀಡಿದರು.

ಈ ಸಂದರ್ಭದಲ್ಲಿ ಆರ್.ಚೆನ್ನಪ್ಪ ಕೋಟ್ಯಾನ್, ಸೀತರಾಮ ಪೂಜಾರಿ, ಚರಣ್‍ಜುಮಾದಿಗುಡ್ಡೆ, ಪುಷ್ಪರಾಜ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್‍ದಂಬೆದಾರ್, ಜಿನೇಂದ್ರಜೈನ್, ಆಧಿರಾಜ್‍ಜೈನ್, ನಿರಂಜನಇಂದ್ರ,  ಭುವನೇಶ್‍ಇಂದ್ರ,  ನಾಲೂರು ರತ್ನಾಕರಕೆಂಡೆ, ಮಹಾವೀರಜೈನ್, ಭರತರಾಜ್‍ಜೈನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *