ಮಲ್ಲೂರು: ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕನಿಗೆ ಗಾಯಗೊಂಡ ಘಟನೆ ಇಲ್ಲಿನ ಸಮೀಪದ ಮಲ್ಲೂರಿನ ಬದ್ರಿಯಾ ನಗರದ ಚರ್ಚ್ ಬಳಿ ಸೋಮವಾರ ನಡೆದಿದೆ.
ಗಾಯಾಳನ್ನು ರೋನಿ ಡಿಸೋಜಾ ಎಂದು ಗುರುತಿಸಲಾಗಿದೆ.
ಕಾರು ಕಂಬಕ್ಕೆ ಢಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಕಾರಿನ ಮೇಲೆ ಬಿದ್ದ ಪರಿಣಾಮ ಚಾಲಕರೋನಿ ಅವರಿಗೆ ಸ್ವಲ್ಪ ಪ್ರಮಾಣದ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಘಟನೆಯಿಂದ ಕಾರು ಭಾಗಶಃ ಹಾನಿಯಾಗಿದೆ.

