ನಾಗಪುರ: ಸಂಘಕ್ಕೆ ಇಡೀ ಸಮಾಜವನ್ನು ಒಂದು ಗೂಡಿಸಬೇಕಾಗಿದ್ದು, ಆದ್ದರಿಂದ ಆರೆಸ್ಸೆಸ್ ಗೆ ಯಾರು ಕೂಡ ಹೊರಗಿನವರಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿ ನಡೆಯುತ್ತಿರುವ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ನಾವೆಲ್ಲಾ ಒಂದು ಎನ್ನುವುದೇ ನಮ್ಮ ದೃಷ್ಟಿಕೋನ. ಇದು ಕೆಲವರಿಗೆ ಅರ್ಥವಾದರೆ ಇನ್ನು ಕೆಲವರಿಗೆ ಇದು ಅರ್ಥವಾಗುದಿಲ್ಲ, ಹಲವರಿಗೆ ಇದು ಅರ್ಥವಾಗುವುದು ಬೇಕಾಗಿಲ್ಲ ಎಂದು ತಿಳಿಸಿದರು.
ಸಂಘಕ್ಕೆ ಇಡೀ ಸಮಾಜವನ್ನು ಒಂದು ಗೂಡಿಸಬೇಕಾಗಿದೆ ಆದ್ದರಿಂದ ಆರ್ ಎಸ್ ಎಸ್ ಗೆ ಯಾರು ಕೂಡ ಹೊರಗಿನವರಲ್ಲ ಎಂದು ಅವರು, ಭಾರತದಲ್ಲಿರುವ ಹಲವು ಸಿದ್ಧಾಂತಗಳ ಮೂಲ ಉದ್ದೇಶ ವಿಷ್ಟೇ ದೇಶವನ್ನು ಮುಂದಕ್ಕೆ ತೆಗದುಕೊಂಡು ಹೋಗುವುದು ಮತ್ತು ಅದರ ಭವಿಷ್ಯವನ್ನು ಹಸನಗೊಳಿಸುವುದು ಎಂದು ಹೇಳಿದರು.

