ಬಂಟ್ವಾಳ: ತಾಲೂಕಿನ ನೈನಾಡು ಸಕರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಇಕೋ ಕ್ಲಬ್ ವತಿಯಿಂದ ಮಂಗಳವಾರ ವಿವಿಧ ಬಗೆಯ ಸುಮಾರು 500ಕ್ಕೂ ಮಿಕ್ಕಿ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಅಶೋಕ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ ಪೂಜಾರಿ, ಉದ್ಯಮಿ ನೆಲ್ವಿಸ್ಟರ್ ಪಿಂಟೋ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಇದ್ದರು.

