f5c17b971d11c711a3cc1e68ac725cb4

ಮಂಗಳೂರು: ರಾಜ್ಯದಲ್ಲಿ ಹಸಿದ ಜೆಡಿಎಸ್ ಹಾಗೂ ಹಳಸಿದ ಕಾಂಗ್ರೆಸ್‌ನ ಮೈತ್ರಿ ಸರಕಾರ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.

 

ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೆಂಗಳೂರು, ಬಿಜಾಪುರ, ಬಳ್ಳಾರಿ, ಬೆಳಗಾವಿ ಹಾಗೂ ಬೀದರ್‌ನಲ್ಲಿ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳು ಸಿಗದೆ ಆಡಳಿತ ನಡೆಸಲು ಮ್ಯಾಜಿಕ್ ಸ್ಥಾನ ಗಳಿಸುವಲ್ಲಿ ಪಕ್ಷ ವಿಫಲವಾಗಿದೆ. ಜೆಡಿಎಸ್ ಅಪವಿತ್ರ ಮೈತ್ರಿಯ ಮೂಲಕ ಸರಕಾರ ರಚಿಸಿದೆ ಎಂದು ಕಿಡಿಕಾರಿದರು.

 

ಕೆಲವೊಂದು ಜಿಲ್ಲೆಗಳಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಗಳಿಸುವಲ್ಲಿ ವಿಫಲವಾಗಿರುವ ಬಗ್ಗೆ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯ ಬಳಿಕ ಸಮಾಲೋಚನೆ ನಡೆಸಿ ಚರ್ಚಿಸಲಾಗುವುದು ಎಂದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರನ್ನು ಒಗ್ಗಟ್ಟಾಗಿಸಲು ಪ್ರಯತ್ನಿಸಲಾಗುವುದು ಎಂದರು.

 

 

 

 

 

 

 

 

 

 

 

 

 

 

 

By Suddi9

Leave a Reply

Your email address will not be published. Required fields are marked *