ಕೋಲಾರ : ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆಗೆ ಕೋರಮಂಗಲ ಚಲ್ಲಘಟ್ಟ ಯೋಜನೆಯ ನೀರು ಕೊನೆಗೂ ಹರಿಸಿರುವುದು ಸಂತಸವಾಗಿದೆ. ನಿರಂತರವಾಗಿ ಒಂದು ವರ್ಷಗಳ ಕಾಲ ಧರಣಿ ನಡೆಸಿ ಸರ್ಕಾರವನ್ನು ಆಗ್ರಹಿಸಿದ ಪರಿಣಾಮ ಕೆ.ಸಿ.ವ್ಯಾಲಿ ಕಾಮಗಾರಿಯನ್ನು ತಡವಾಗಿ ಪೂರ್ಣಗೊಳಿಸಿ ತಾಲ್ಲೂಕಿನ ಕೆರೆಗೆ ಹರಿಸಿರುವುದು ನೀರಾವರಿ ಹೋರಾಟಕ್ಕೆ ಸಂದ ಜಯವಾಗಿದೆ. ಆದರೆ ಹೋರಾಟಗಾರರು ಮುಖ್ಯಮಂತ್ರಿಗಳಿಗೆ ಅನೇಕ ಬಾರಿ ಮನವಿ ಮಾಡಿ ಮೂರನೇ ಬಾರಿ ಶುದ್ಧೀಕರಿಸಿ ಹರಿಸುವ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಈಗ ಕೇವಲ 70 ಎಂ.ಎಲ್.ಡಿ. ನೀರನ್ನು ಮಾತ್ರ ಹರಿಸುತ್ತಿದ್ದು, ಯೋಜನೆಯ ಲಭ್ಯತೆ 40 ಎಂ.ಎಲ್.ಡಿ. ನೀರನ್ನು ಹರಿಸಿದಲ್ಲಿ ಜಿಲ್ಲೆಯ 126 ಕೆರೆಗಳನ್ನು ತುಂಬಿಸಬಹುದಾಗಿದೆ. ಆಗಾಗಿ ಕಾಮಗಾರಿಯು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ. ಹಲವಾರು ನೀರಾವರಿ ಯೋಜನೆಗಳನ್ನು ಘೋಷಿಸಿ ಅನುಷ್ಠಾನಗೊಳಿಸದೆ ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿದ್ದರು. ಆದರೆ ಅಂತರ್ಜಲ ಅಭಿವೃದ್ಧಿಪಡಿಸುವ ಬೆಂಗಳೂರಿನ ಕೊಳಚೆ ನೀರನ್ನು ಶುದ್ದೀಕರಿಸಿ ಹರಿಸಿರುವುದು ಸಮಾದಾನ ತಂದಿದೆಯಾದರೂ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಯರಗೋಳ್ ಕುಡಿಯುವ ನೀರಿನ ಯೋಜನೆಯು ಇದುವರೆಗೂ ಪೂರ್ಣಗೊಳ್ಳದೆ ಜಿಲ್ಲೆಯ ಜನ ಪ್ಲೋರೈಡ್ ನೀರನ್ನು ಕುಡಿದು ಅನಾರೋಗ್ಯ ಪೀಡಿತರಾಗಿದ್ದಾರೆ. ಯರಗೋಳ್ ಡ್ಯಾಂ ಕಾಮಗಾರಿಯನ್ನು ಚುರುಕಾಗಿ ಪೂರ್ಣಗೊಳಿಸಿದ್ದರೆ. ಕುಡಿಯುವ ನೀರಿನ ಸಮಸ್ಯೆಯು ಬಗೆಹರಿಯುತ್ತಿತ್ತು. ಇನ್ನಾದರೂ ಹೊಸ ಸರ್ಕಾರ ಯರಗೋಳ್ ಡ್ಯಾಂ ಕಾಮಗಾರಿಯನ್ನು ಗಂಭೀರವಾಗಿ ಪರಿಗಣಿಸಿ ಪೂರ್ಣಗೊಳಿಸಬೇಕಾಗಿದೆ.
ಎತ್ತಿನಹೊಳೆ ಯೋಜನೆಯನ್ನು ಆದಷ್ಟ ಶೀಘ್ರವಾಗಿ ಪೂರ್ಣಗೊಳಿಸಿ ಬಯಲು ಸೀಮೆಯ ನೀರಿನ ದಾಹವನ್ನು ನೀಗಿಸಬೇಕಾಗಿದೆ. ಕೃಷಿಯನ್ನೇ ನಂಬಿರುವ ಬಯಲುಸೀಮೆ ಜನಕ್ಕೆ ಶಾಶ್ವತವಾದ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಂಕಷ್ಠದಲ್ಲಿರುವ ರೈತನ್ನು ಪಾರುಮಾಡಬೇಕಾಗಿದೆ.
ಈ ಎಲ್ಲಾ ನೀರಾವರಿ ಯೋಜನೆಗಳು ಪೂರ್ಣಗೊಂಡಲ್ಲಿ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿದು ರೈತಾಪಿ ವರ್ಗ ಆರೋಗ್ಯ ಸಮಸ್ಯೆ, ನಿರುದ್ಯೋಗ ಸಮಸ್ಯೆಗಳು ಬಗೆಹರಿಸಬೇಕಾಗಿದೆ ಎಂದು ನೀರಾವರಿ ಸಂಚಾಲಕ ವಿ.ಕೆ.ರಾಜೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
.

