ಶಿವಮೊಗ್ಗ: ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ತಮ್ಮಡಿಹಳ್ಳಿ ಗ್ರಾಮದ ಜಂಗ್ಲಿ ಕೆರೆಯಲ್ಲಿ ರವಿವಾರ ನಡೆದಿದೆ.
ಮೃತ ಬಾಲಕರನ್ನು ತಮ್ಮಡಿಹಳ್ಳಿ ಗ್ರಾಮದ ಸಂತ್, ಚಿರಂತ್, ಅಜೇಯ ಎಂದು ಗುರುತಿಸಲಾಗಿದೆ.
ಇಂದು ಮೂವರೂ ಕೆರೆಗೆ ಈಜಾಡಲು ಹೋಗಿದ್ದರು. ಜೋರಾಗಿ ಮಳೆ ಬಂದಿದ್ದರಿಂದ ಕೆರೆಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಆಳ ತಿಳಿಯದೆ ಕೆರೆಗೆ ಇಳಿದ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮಡಿಹಳ್ಳಿ ಗ್ರಾಮದಲ್ಲಿ ಮದುವೆ ಇದ್ದ ಕಾರಣ ಎಲ್ಲರೂ ಅಲ್ಲಿ ಹೋಗಿದ್ದರು. ಹಾಗಾಗಿ ಬಾಲಕರನ್ನು ರಕ್ಷಿಸಲು ಯಾರೂ ಇರಲಿಲ್ಲ ಎನ್ನಲಾಗಿದೆ.
ಘಟನ ಸ್ಥಳಕ್ಕೆ ಕುಂಸಿ ಪೋಲಿಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

