Parisara Jagruthi1

ಕೋಲಾರ: ಇಂದು ಮಾನವನು ಪ್ರಕೃತಿಯ ಜತೆ ಹೊಂದಾಣಿಕೆ ಬೆಳೆಸುವುದನ್ನು ಮರೆತಿದ್ದಾನೆ. ಮಕ್ಕಳಿಗೆ ಪರಿಸರ ಜಾಗೃತಿಯ ಕಾಳಜಿ ಮೂಡಿಸುವುದು ಅಗತ್ಯ ಎಂದು ಜಿಲ್ಲಾ ಸರ್ವಶಿಕ್ಷಣ ಅಭಿಯಾನ ಉಪ ಸಮನ್ವಯಾಧಿಕಾರಿ ಎಂ.ಮೈಲೇರಪ್ಪ ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ಹರಟಿಯಲ್ಲಿಂದು ಗ್ರಾಮ ಪಂಚಾಯತ್ ವತಿಯಿಂದ ಏರ್ಪಡಿಸಿದ್ದ ಪರಿಸರ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಮನುಷ್ಯನ ಸ್ವಾರ್ಥ ಬದುಕು ಆತನ ಬದುಕನ್ನೇ ನಾಶಮಾಡುತ್ತದೆ. ಪರಿಸರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿ ಹಾಗೂ ಯುವ ಸಮುದಾಯದ ಮೇಲಿದೆ ಎಂದರು.

ಜಿಲ್ಲಾ ಮಾಧ್ಯಮಿಕ ಶಿಕ್ಷಣ ಅಭಿಯಾನ ಉಪ ಸಮನ್ವಯಾಧಿಕಾರಿ ಟಿ. ಸಿದ್ದೇಶ್ ಮಾತನಾಡಿ, ಶಿಕ್ಷಣ ಇಲಾಖೆ ಪ್ರಾಥಮಿಕ ಶಿಕ್ಷಣವನ್ನು  ಸಾರ್ವತ್ರೀ ಕರಣ ಗೊಳಿಸುವಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇಂತಹ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮರಾವತಿ ಮಾತನಾಡಿ, ಪರಿಸರ ದಿನಾಚರಣೆಗೂ ಮುನ್ನ ಇಂದಿನಿಂದಲೇ ಪರಿಸರ ಜಾಗೃತಿ ಚರ್ಚೆ, ಭಾಷಣ ಸ್ಪರ್ಧೆಗಳನ್ನು ನಡೆಸಲಿದ್ದು, ವಿದ್ಯಾರ್ಥಿಗಳು ಭಾಗವಹಿಸಬೇಕು ಹಾಗೂ ಹಸಿರು ಕ್ರಾಂತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ   ಶಾಲಾ ಮುಖ್ಯೋಪಾದ್ಯಾಯ ಜಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕರಾದ ಎಂ.ಕೃಷ್ಣಪ್ಪ, ಪಿ.ಎಂ.ಗೋವಿಂದಪ್ಪ, ಎಂ.ಆರ್.ಮೀನಾ, ಹೆಚ್.ಮುನಿಯಪ್ಪ, ಆರ್.ಮಂಜುಳಾ, ಕೆ.ಮಮತಾ ಉಪಸ್ಥಿತರಿದ್ದರು.

 

 

By Suddi9

Leave a Reply

Your email address will not be published. Required fields are marked *