IMG_20180530_171036-clr

ಪುತ್ತೂರು: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ಭಾಗದಲ್ಲಿ ನಿರ್ಮಿಸಲಾದ ತಡೆಗೋಡೆ ನಿನ್ನೆ ರಾತ್ರಿ ಕುಸಿದು ಬಿದ್ದಿದೆ.

ಕಚೇರಿಯ ಕೆಳ ಭಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಮಣ್ಣು ತೆಗೆಯಲಾಗಿತ್ತು. ನಿನ್ನೆ ಸುರಿದ ಮಳೆಗೆ ಮಣ್ಣು ತೆಗೆದು ಕಟ್ಟಿದ ತಡೆಗೋಡೆ ಕುಸಿದಿದೆ. ಶಿಕ್ಷಣಾಧಿಕಾರಿ ಕಚೇರಿಯ ಕಟ್ಟಡದ ಸಮೀಪದ ವರೆಗೂ ಮಣ್ಣು ಕುಸಿದಿದ್ದು, ಇದೀಗ ಕಟ್ಟಡವೂ ಅಪಾಯ ಸ್ಥಿತಿಯಲ್ಲಿದೆ. ಇಂದಿರಾ ಕ್ಯಾಂಟೀನ್ ಗಾಗಿ ಮಣ್ಣು ತೆಗೆಯುವ ಹಂತದಲ್ಲಿ ಸಮರ್ಪಕವಾದ ತಡೆಗೋಡೆ ನಿರ್ಮಾಣ ಮಾಡದೆ ಇರುವ ಹಿನ್ನಲೆಯಲ್ಲಿ ಇದೀಗ ಈ ತಡೆಗೋಡೆ ಕುಸಿದಿದೆ. ಸಿಮೆಂಟ್ ಬಳಕೆ ಮಾಡದೆ ಕೆವಲ ಕಲ್ಲು ಮಾತ್ರ ಕಟ್ಟಿರುವ ಕಾರಣ ನಿರಂತರವಾಗಿ ಸುರಿದ ಮಳೆಗೆ ಈ ತಡೆಗೋಡೆ ಕುಸಿದಿದೆ ಎಂದು ತಿಳಿದುಬಂದಿದೆ.

By suddi9

Leave a Reply

Your email address will not be published. Required fields are marked *