ಮಂಗಳೂರು: 5 ವರ್ಷದ ಬಾಲಕಿಯೋರ್ವಳು ಆಯಾತಪ್ಪಿ ಅಪಾರ್ಟ್ ಮೆಂಟ್ ನ 8 ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿರುವ ಘಟನೆ ಗುರುವಾರ ನಗರದ ಶಕ್ತಿನಗರದಲ್ಲಿ ನಡೆದಿದೆ.

ಮೃತಪಟ್ಟ ಬಾಲಕಿಯನ್ನು ವಿಲ್ಸನ್ ಸೆಬಾಸ್ಟಿಯನ್ ಹಾಗೂ ಅಲಿತಾ ಡಿಸೋಜಾ ದಂಪತಿಯ ಪುತ್ರಿ ಶಾನೆಲ್ ಜಿನಿಶೀಯಾ ಡಿಸೋಜಾ (5)ಎಂದು ಗುರುತಿಸಲಾಗಿದೆ.

ಇನ್ನು ಪೊಲೀಸ್ ಮಾಹಿತಿಯ ಪ್ರಕಾರ, ಬೆಳಗ್ಗೆ 8.45 ಕ್ಕೆ ಶಾನೆಲ್ ಪ್ಲಾಟಿನ್ ಬೆಡ್ ರೂಮಿಗೆ ಒತ್ತಿನಲ್ಲೇ ಇರುವ ಬಾಲ್ಕನಿ ಮೇಲೆ ಹತ್ತಿ ಸ್ಳೈಡರ್ ಕಿಟಕಿಯ ಮೂಲಕ ಹೊರಗೆ ಇಣುಕುವ ವೇಳೆ ಆಯತಪ್ಪಿ 2 ನೇ ಅಂತಸ್ತಿನ ಖಾಲಿ ವರಾಂಡದ ಮೇಲೆ ಬಿದ್ದ ಪರಿಣಾಮ ತಲೆಗೆ ಹಾಗೂ ಎದೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *