ಪಿಲಿಕುಳದಲ್ಲಿ ಆರನೆ ವರ್ಷದ ನೇತ್ರಾವತಿ-ಫಲ್ಗುಣಿ ಜೋಡುಕರೆ ಕಂಬಳ
ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವದ ಅಂಗವಾಗಿ ಆರನೆ ವರ್ಷದ ನೇತ್ರಾವತಿ-ಫಲ್ಗುಣಿ ಜೋಡುಕರೆ ಕಂಬಳ ಶನಿವಾರ ಆರಂಭವಾಯಿತು.
ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಜೆ.ಆರ್.ಲೋಬೊ ಕಂಬಳ ಉದ್ಘಾಟಿಸಿದರು. ಜಿಲ್ಲಾಕಾರಿ, ಎ.ಬಿ.ಇಬ್ರಾಹಿಂ, ಡಾ.ಜೀವಂಧರ ಬಲ್ಲಾಳ್, ರಾಜವರ್ಮ ಬಲ್ಲಾಳ್, ಪಿಲಿಕುಳ ಜೈವಿಕ ಉದ್ಯಾನವನ ನಿದರ್ೆಶಕ ಜಯಪ್ರಕಾಶ್ ಭಂಡಾರಿ, ಟಿ.ಸುಬ್ಬಯ್ಯ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಕಂಬಳಕ್ಕೆ ಭೇಟಿ ನೀಡಿದರು.
ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಗುತ್ತು ಮನೆಯ ಬಾಕಿಮಾರು ಗದ್ದೆಯಲ್ಲಿ ನಿಮರ್ಿಸಿದ ನೇತ್ರಾವತಿ-ಫಲ್ಗುಣಿ ಜೋಡುಕರೆ ಕಂಬಳದಲ್ಲಿ ಈ ಬಾರಿ 87 ಜೋಡಿ ಕೋಣಗಳು ಭಾಗವಹಿಸಿದೆ.
ನೇಗಿಲು ಕಿರಿಯ- 27
ನೇಗಿಲು ಹಿರಿಯ – 11
ಹಗ್ಗ ಕಿರಿಯ- 24
ಹಗ್ಗ ಹಿರಿಯ- 15
ಕನೆಹಲಗೆ- 4
ಅಡ್ಡಹಲಗೆ- 6
ಈ ಸಂದರ್ಭ ಕಂಬಳದ ಓಟಗಾರರಾಗಿ, ತೀಪರ್ುಗಾರರಾಗಿ ಹಲವಾರು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ನಾರಾಯಣ ಬಂಗೇರ ಕೆವರ್ಾಶೆ, ಸತೀಶ್ ಶೆಟ್ಟಿ ರಂಜಳ ಪಂಜಳ, ಕುಕ್ಕುಂದೂರು ಶಂಕರ ಮಡಿವಾಳ ಶಂಕರಬೆಟ್ಟು ಹಾಗೂ ಕಂಬಳದ ದಾಖಲಾತಿಯಲ್ಲಿ ಸಹಕರಿಸುತ್ತಿರುವ ನಗ್ರಿ ಸಂಕಪ್ಪ ರೈಅವರನ್ನು ಸನ್ಮಾನಿಸಲಾಯಿತು

