Suicide-image

ಕೈಕಂಬ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಎಡಪದವು ಸಮೀಪದ ಕಣ್ಣೂರಿ ದರ್ಖಾಸ್ ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಮೃತರನ್ನು ಎಡಪದವು  ನೋಣಯ ಗೌಡ ಅವರ ಪುತ್ರ ಚಿದಾನಂದ ಗೌಡ (40)ಎಂದು ಗುರುತಿಸಲಾಗಿದೆ.

ಸೆಂಟ್ರಿಂಗ್ ಕಾಂಟ್ರಕ್ಟರ್ ಆಗಿ ದುಡಿಯುತ್ತಿದ್ದ ಚಿದಾನಂದ ಅವರು, ಇತ್ತಿಚೇಗೆ ವಿಪರೀತ ಕುಡಿಯುವ ಚಟಹೊಂದಿದ್ದರು. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಜಪೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *