4b32469e-da1b-49de-8dcf-29fdd6572217

ಅಡ್ಡೂರು: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಅಡ್ಡೂರಿನಲ್ಲಿ ಶನಿವಾರ ಸಂಜೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಮತದಾನ ನಡೆದಿದೆ.

ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆ ಬಿರುಸಿನ ಮತದಾನ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಮತದಾರರ ಸಂಖ್ಯೆ ಇಳಿಮುಖವಾಗಿದೆ. ಬಳಿಕ ಸಂಜೆ 5ರ ಸುಮಾರಿಗೆ ಮಂದಗತಿಯಲ್ಲಿ ಮತದಾನ ನಡೆದಿದೆ.

ಬಿರು ಬಿಸಿಲನ್ನು ಲೆಕ್ಕಿಸದೆ ಮತದಾನ ಕೇಂದ್ರಗಳತ್ತ ಮತದಾರರ ದಂಡು ಹರಿದು ಬಂದಿದ್ದು, ವಯೋವೃದ್ಧರು, ಮಹಿಳೆಯರು ಸೇರಿದಂತೆ ಯುವಕರು ಅತ್ಯಂತ ಉತ್ಸುಕತೆಯಿಂದ ಮತದಾನ ಮಾಡಿದರು.

ಇನ್ನೂ ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಯಾವುದೇ ವಾಹನಗಳ ನಿಲುಗಡೆ, ಜನ ಜಂಗುಳಿ ಸೇರದಂತೆ ಮತಗಟ್ಟೆಗಳ ಬಳಿ ಭದ್ರತಾ ಪಡೆ, ಪೊಲೀಸ್ ಸಿಬ್ಬಂದಿ ಬೀಡುಬಿಟ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸುಗಮ ಮತದಾನಕ್ಕೆ ಅನುವುಮಾಡಿಕೊಟ್ಟರು.

ಈ ಪ್ರದೇಶದಲ್ಲಿ ಗಲಭೆಯ ವದಂತಿ ಹಬ್ಬಿದ್ದು, ತಕ್ಷಣ ಭದ್ರತಾ ಪಡೆ ಧಾವಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಯಿತು. ಮತದಾನಕ್ಕೆ ಯಾವುದೇ ಅಡ್ಡಿ-ಆತಂಕ ಆಗಿಲ್ಲ ಎಂದು ಚುನಾವಣಾ ಕಚೇರಿಯ ಸೆಕ್ಟರ್ ಅಧಿಕಾರಿ ಗಂಗಾಧರ ತಿಳಿಸಿದ್ದಾರೆ.

64549a3f-ffb7-4c67-be3c-871103d30c38

 

By Suddi9

Leave a Reply

Your email address will not be published. Required fields are marked *