ಬಂಟ್ವಾಳ: ತುಳು ಭಾಷೆ ಬೆಳೆಯಬೇಕು. ತುಳುನಾಡು ಬೆಳಗಬೇಕು. ಇಲ್ಲಿನ ರಾಜಕೀಯ ನಾಯಕರು ಈ ನಿಟ್ಟಿನಲ್ಲಿ ತಮ್ಮ ಇಚ್ಚಾಶಕ್ತಿಯನ್ನು ಪ್ರದಶರ್ೀಸಬೇಕು ಎಂದು ಸಾಂಗ್ಲಿ ಕನರ್ಾಟಕ ತುಳುನಾಡು ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಸಾಂಗ್ಲಿ ಹೇಳಿದರು.
ವಿಶ್ವ ತುಳುವೆರೆ ಪರ್ಬ 2014 ಬಂಟ್ವಾಳ ತಾಲೂಕು ಸಮಿತಿಯ ಆಶ್ರಯದಲ್ಲಿ ಭಾನುವಾರ ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ತುಳು ಮಿನದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನವೆಂಬರ್ನಲ್ಲಿ ಮೂರು ದಿನಗಳ ಕಾಲ ಅಖಿಲ ಭಾರತ ತುಳು ಒಕ್ಕೂಟದ ಬೆಳ್ಳಿ ಹಬ್ಬದ ಅಂಗವಾಗಿ ಮಂಗಳೂರಿನ ಪಿಲಿಕುಲದಲ್ಲಿ ಧರ್ಮಸ್ಥಳದ ಧಮರ್ಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಸಾರಥ್ಯದಲ್ಲಿ ನಡೆಯುವ ವಿಶ್ವ ತುಳುವೆರೆ ಪರ್ಬ ಕಾರ್ಯಕ್ರಮಕ್ಕೆ ಪೂರಕವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

10

11

12

15

16

17

18

19

20

21

22

23

28

30

31

32

35

39

40

KAR_0620

KAR_0607

KAR_0619
ಬಂಟ್ವಾಳ ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ ಅಧ್ಯಕ್ಷತೆ ವಹಿಸಿದ್ದರು. ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಸುವ ಕಾರ್ಯ ಇಂದಿನ ಅಗತ್ಯವಾಗಿದೆ. ಆ ನೆಲೆಯಲ್ಲಿ ತುಳುಪರ ಕಾರ್ಯಕ್ರಮ ಆಗಾಗ್ಗೆ ನಡೆಯಬೆಕಾಗಿದೆ ಎಂದರು.
ಅಖಿಲ ಬಾರತ ತುಳು ಒಕ್ಕೂಟದ ಉಪಾಧ್ಯಕ್ಷ ನಿಟ್ಟೆ ಶಶಿಧರ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ ನವಂಬರ್ನಲ್ಲಿ ಪಿಲಿಕುಳದಲ್ಲಿ ನಡೆಯುವ ವಿಶ್ವ ತುಳುವೆರೆ ಪರ್ಬ ತುಳುವರೆಲ್ಲರೂ ಒಗ್ಗಟ್ಟಾಗಿ ತಮ್ಮ ಶಕ್ತಿಯನ್ನು ಪ್ರದಶರ್ಿಸುವ ವೇದಿಕೆಯಾಗಬೆಕು. ತುಳುನಾಡಿಗೆ ಎದುರಾಗುವ ಸಮಸ್ಯೆ ಸವಾಲುಗಳನ್ನು ಎದುರಿಸುವ ಸಂಕಲ್ಪ ತೊಡಬೇಕು. ಈ ಸಮ್ಮೆಳನದಲ್ಲಿ ತುಳು ಎಂಟನೇ ಪರಿಚ್ಚೇದಕ್ಕೆ ಸೇರುವ ದೃಷ್ಟಿಯಿಂದ ಅನುಷ್ಟಾನ ಸಮಿತಿ ರಚಿಸಿ ನಿರಂತರ ಹೋರಾಟ ರೂಪಿಸಲಾಗುವುದು ಎಂದರು.
ಶ್ರೀ.ಕ್ಷೇ.ಧ.ಗ್ರಾ.ಬಂಟ್ವಾಳ ಘಟಕದ ಯೋಜನಾಧಿಕಾರಿ ಸುನೀತಾ ನಾಯಕ್ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಬಂಟ್ವಾಳ ತುಳು ಕೂಟದ ಅಧ್ಯಕ್ಷ ಎ.ಸಿ.ಬಂಡಾರಿ ಸ್ವಾಗತಿಸಿದರು. ಕೂಟದ ಸಂಚಾಲಕ ಡಿ.ಎಂ.ಕುಲಾಲ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಮಂಜುವಿಟ್ಲ ವಂದಿಸಿದರು. ಕಲಾವಿದ ಎಚ್ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಪ್ರಮುಖರಾದ ಪ್ರೊ.ತುಕರಾಮ್ ಪೂಜಾರಿ,ಸುದರ್ಶನ್ ಜೈನ್ ,ಕೈಯೂರು ನಾರಾಯಣ ಭಟ್, ಸೀತಾರಾಮ ಶೆಟ್ಟಿ,ಎಂ.ಪರಮೇಶ್ವರ,ತಾರಾನಾಥ ಕೊಟ್ಟಾರಿ, ವಿಜಯ ಶೆಟ್ಟಿ ಸಾಲೆತ್ತೂರು ಮೊದಲಾದವರಿದ್ದರು.
ವಿವಿಧ ವಿಚಾರ ಗೋಷ್ಠಿ-ಸಾಂಸ್ಕೃತಿಕ ಹಬ್ಬ:
ಬಂಟ್ವಾಳ: ವಿಶ್ವ ತುಳುವೆರೆ ಪರ್ಬ 2014 ಬಂಟ್ವಾಳ ತಾಲೂಕು ಸಮಿತಿಯ ಆಶ್ರಯದಲ್ಲಿ ಭಾನುವಾರ ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ತುಳು ಮಿನದನ ಕಾರ್ಯಕ್ರಮದಲ್ಲಿ ವಿವಿದ ವಿಚಾರಗೋಷ್ಟಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಇತಿಹಾಸ ಸಂಶೋಧಕ ಡಾ.ಪುಂಡಿಕಾ ಗಣಪಯ್ಯ ಭಟ್ ತುಳುನಾಡ್ದ ಪಿರಾಕ್ದ ಬೇರೋದ ಊರು ಬಂಟ್ವಾಳ , ಉಪನ್ಯಾಸಕ ಚೇತನ್ ಮುಂಡಾಜೆ ತುಳುನಾಡ್ದ ತುಳು ಸುದ್ದಿ ಓಲೆಲೆನ ಬೆನ್ನಿ, ಉಪನ್ಯಾಸಕ ಡಾ.ನರೇಂದ್ರ ರೈ ದೇರ್ಲಕೃಷಿ ಬದ್ಕ್ ಬೊಕ್ಕ ಅಂತರ್ಜಲ ಕುಸಿತ, ಪ್ರಾಂಶುಪಾಲೆ ರಮಾ ಎಸ್ ಭಂಡಾರಿ 1947 ರ್ದ್ 1977 ಮುಟ್ಟ ತುಳುನಾಡ್ದ ರಾಜಕೀಯೊಡು ಪೊಣ್ಣು ಪೊಂಜೋವುಲು ವಿಷಯದಲ್ಲಿ ವಿಚಾರ ಮಂಡಿಸಿದರು.
ಹಿರಿಯ ಸಾಹಿತಿ ಪಡಾರು ಮಹಾಬಲೇಶ್ವರ ಭಟ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಟಿಯಲ್ಲಿ ಕವಿಗಳಾದ ಚೆನ್ನಪ್ಪ ಅಳಿಕೆ, ವಿಶ್ವನಾಥ್ ಕುಲಾಲ್ ಇಡ್ಕಿದು, ಎಂ.ಡಿ.ಮಾಯಿಲ, ವಿ.ಸು.ಭಟ್, ಸುದಾ ನಾಗೇಶ, ಸತೀಶ್ ಕಕ್ಯಪದವು ಕವನ ವಾಚಿಸಿದರು.
ಉದ್ಘಾಟನಾ ಸಮಾರಂಭಕ್ಕೆ ಮುನ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದಿಂದ ‘ತುಳುನಾಡ್ದ ಮದಿಮೆದ ಪೊಲರ್ು’ ಎಂಬ ವಿಶೇಷ ಕಾರ್ಯಕ್ರಮ, ಮದ್ಯಾಹ್ನದ ಬಳಿಕ ಕಲ್ಲಡ್ಕ ಅಭಿನಯ ಕಲಾವಿದೆರ್ ತಂಡದಿಂದ ‘ತೆಲಿಕೆದ ಗಮ್ಮತ್ತ್’ , ಅರುಣ್ ಚಂದ್ರ ಬಿ.ಸಿ.ರೋಡ್ ತಂಡದಿಂದ “ತೆಲಿಕೆದ ತಮ್ಮನ”, ಮಂಚಿ ಬೊಲ್ಪು ಕಲಾ ತಂಡದಿಂದ “ಜಾನಪದ ಕದಿಕೆ” , ಯಕ್ಷಲೋಕ ಸಾಂಸ್ಕೃತಿ ಸಂಗಮ ತಂಡದಿಂದ ತುಳು ಪದರಂಗೀತೋ ಕಾರ್ಯಕ್ರಮ, ಕಲಾವಿದ ಸರಪಾಡಿ ಅಶೋಕ ಶೆಟ್ಟಿಯವರ ಸಂಯೋಜನೆಯಲ್ಲಿ ತುಳುನಾಡ್ದ ಉದಿಪು ಎಂಬ ತುಳು ಯಕ್ಷಗಾನ ಪ್ರದರ್ಶನ ನಡೆಯಿತು.

By Suddi9

Leave a Reply

Your email address will not be published. Required fields are marked *