ಕುಪ್ಪೆಪದವು: ಇಲ್ಲಿನ ಇಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ಇದರ ವಜ್ರಮಹೋತ್ಸವ ಸಮಾರಂಭ ಗುರುವಾರ ಚರ್ಚ್ ನ ಆಶಾ ಕಿರಣ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ, ಪ್ರತಿಯೊಬ್ಬರು ದೇವರ ಮೇಲೆ ಅಛಲ ವಿಶ್ವಾಸ ಇರಿಸಿ ಆ ಮೂಲಕ ಪ್ರೀತಿ, ಬಾಂಧವ್ಯದಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಈ ವೇಳೆ ಚರ್ಚ್ ನ ಆಡಳಿತ ಮಂಡಳಿ ವತಿಯಿಂದ ಚರ್ಚ್ ಧರ್ಮಗುರು ವಂ. ವೆಲೇರಿಯನ್ ಡಿ’ಸೋಜಾ, ವಂ.ಬಾಪ್ ರೊಸಾರಿಯೊ ಫೆರ್ನಾಂಡಿಸ್, ಡೇನಿಸ್ ಮೊರಸ್ ಪ್ರಭು ಹಾಗೂ ಮತ್ತಿತರರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಧರ್ಮಪ್ರಾಂತ್ಯದ ಚರ್ಚ್ ಬಿಷಪ್ ಅತಿ.ವಂ.ರೆ.ಡಾ. ಬೆರ್ನಾರ್ಡ್ ಮೊರಸ್, ಬಂಟ್ವಾಳ ವಾರ್ಡೋದ ಧರ್ಮಗುರು ಅತಿ. ವಂ. ರೆ. ಮೇಕ್ಸಿಂ ಎಲ್.ನೊರೋನ್ಹಾ, ಜೋಸೆಫ್ ರೊಜಾರಿಯೊ, ಬಾಪ್ ಜೋನ್ ನೊರೋನ್ಹಾ, ಫಿಗರ್ಜ್ ವಿಗಾರ್, ವಂ. ಬಾಪ್ ಆಸ್ಸಿಸ್ಸಿ ರೆಬೆಲ್ಲೊ, ಮರಿಯಗಿರಿಯ ಸುಪಿರಿಯರ್ ಸಿ.ರೇಖಾ, ಸಿ.ಕ್ಲೆರಿಸಾ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಗ್ರೇಗರಿ ರೊಸಾರಿಯೊ, ಕಾರ್ಯದರ್ಶಿ ಶರತ್ ರೊಸಾರಿಯೊ, ಇಗ್ನೇಷಿಯಸ್ ರೊಸಾರಿಯೊ ಮತ್ತಿತರರು ಉಪಸ್ಥಿತರಿದ್ದರು.
ಸ್ಮರಣಾ ಸಂಚಿಕೆ ಬಿಡುಗಡೆ: ಇಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ 60 ವರ್ಷ ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ರೆ.ಡಾ.ಅಲೋಶಿಯಸ್ ಪಾವ್ಲ್ ಅವರು ವಿಶೇಷ ಸ್ಮರಣಾ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.


