ಬಂಟ್ವಾಳ: ಕಲ್ಲು ತುಂಬಿದ ಲಾರಿಯೊಂದು ಬ್ರೇಕ್ ಫೈಲ್ ಆಗಿ ಧರೆಗುರುಳಿದ ಪರಿಣಾಮ ಲಾರಿ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಬಿ.ಸಿ.ರೋಡ್ ಸಮೀಪದ ಕಲ್ಪನೆ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೃತ ಲಾರಿ ಚಾಲಕನನ್ನು ತಣ್ಣೀರುಪಂಥ ನಿವಾಸಿ ಅಶ್ರಫ್ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಅಶ್ರಫ್ ಗಂಭೀರಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದು, ಇನ್ನೂ ಲಾರಿಯಲ್ಲಿದ್ದ ನಿರ್ವಾಹಕ ಅಬ್ದುಲ್ ಕರೀಂ ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ದಿತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಲಾರಿಯನ್ನು ಮೇಲೆತ್ತಲಾಗದಿದ್ದರಿಂದ ಬೆಳಗ್ಗೆ ಕ್ರೇನ್ ಮೂಲಕ ತೆಗೆಯಲಾಗುವುದು ಎಂದು ಸಂಚಾರಿ ಪೊಲೀಸ್ ತಿಳಿಸಿದ್ದಾರೆ.


