Pejavar-Sorake-1-1024x768

ಕಾಪು: ಹಾಲಿ ಶಾಸಕ, ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಉಡುಪಿ ಶ್ರೀಕೃಷ್ಣ  ಮಠಕ್ಕೆ ಗುರುವಾರ ಭೇಟಿ ನೀಡಿ  ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ಶ್ರೀಗಳು, ನೀವು ನಮ್ಮೂರಿನವರು. ಉಡುಪಿ ಶ್ರೀಕೃಷ್ಣ ನಿಮ್ಮನ್ನು ಕೈ ಬಿಡಲ್ಲ. ಕಾಪು ಕ್ಷೇತ್ರ ವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಿ ಸಾಕಷ್ಟು ಅಭಿವೃದ್ದಿಗೊಳಿಸಿದ್ದೀರಿ.‌ ನೀವು ನಮ್ಮೂರಿನವರು ಎಂಬ ಬಹಳ ಹೆಮ್ಮೆ ಇದೆ. ಉಡುಪಿ ಶ್ರೀಕೃಷ್ಣ ನಿಮ್ಮನ್ನು ಕೈ ಬಿಡಲ್ಲ ಎಂದು ಆಶೀರ್ವದಿಸಿದರು.

 

By suddi9

Leave a Reply

Your email address will not be published. Required fields are marked *