ಪರ್ಕಳ: ಜೆಸಿಐ ಪರ್ಕಳ ವಲಯ ವತಿಯಿಂದ 11ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ ಇಲ್ಲಿನ ವಿಘ್ನೇಶ್ವರ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.
ಈ ವೇಳೆ ಅರುಣಾ ಎಮ್. ಎನ್., ರಘುನಾಥ ಜೋಯಿಸ ಹಾಗೂ ಧೃತಿ ಪಿ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪರ್ಕಳ ಜೆಸಿಐ ಅಧ್ಯಕ್ಷ ದೇವೇಂದ್ರ ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ 15 ವಲಯಾ ಉಪಾಧ್ಯಕ್ಷ ಜೆಎಫ್ಪಿ ರಾಘವೇಂದ್ರ ಫ್ರಭು ಕಾರ್ವಲು, ವಲಯ ಅಧ್ಯಕ್ಷ ರಾಕೇಶ್ ಕುಂಜೂರು, ವಲಯ 15ರ ಸಲಹೆಗಾರ ರತ್ನಾಕರ ಇಂದ್ರಾಳಿ, ವಲಯಾಧ್ಯಕ್ಷರ ಕಾರ್ಯಕಾರಿ ಸಹಾಯಕ ಶ್ರೀನಿವಾಸ್ ಐತಾಳ್, ರಾಷ್ಟ್ರೀಯ ತರಬೇತುದಾರ ಅರುಣ ಐತಾಳ್, ವಲಯದ ಉಪಾಧ್ಯಕ್ಷೆ ಅಕ್ಷತಾ ಗಿರೀಶ್, ನಿಕಟ ಪೂರ್ವಾಧ್ಯಕ್ಷೆ ಹಾಗೂ ವಲಯಾಧಿಕಾರಿ ಆಶಾ ಬಾಬು, ಸ್ಥಾಪಕಾಧ್ಯಕ್ಷ ಅಚ್ಯುತ ನಾಯ್ಕ, ಕಾರ್ಯಕ್ರಮ ನಿರ್ದೇಶಕರಾದ ರಮ್ಯ ಆರ್ ನಾಯಕ್, ಸುಧೀರ್ ಕುಮಾರ್, ಜೇಸಿರೆಟ್ ಅಧ್ಯಕ್ಷೆ ಇಂದಿರಾ, ಯುವ ಜೇಸಿ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಪೂರ್ವ ವಲಯಾಧಿಕಾರಿಗಳಾದ ರಾಜೇಶ್ ಡಿ. ಶೆಣ್ಯೆ ಮತ್ತು ಪ್ರಮೋದ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಜಸ್ವಂತ್ ಜೋಗಿ ಕಾರ್ಯಕ್ರಮದಲ್ಲಿ ವಂದಿಸಿದರು.

