ramalinga-reddy1-1521181796

ಬೆಂಗಳೂರು: ಗೋಹತ್ಯೆ ನಿಷೇಧಿಸುವುದಾಗಿ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಬದಲು ವಿದೇಶಕ್ಕೆ ಗೋಮಾಂಸ ರಫ್ತನ್ನು ಮೊದಲು ನಿಷೇಧಿಸಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಸವಾಲು ಹಾಕಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಪ್ರಧಾನಿಯಾದ ಬಳಿಕ ಗೋಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನಕ್ಕೆ ಜಿಗಿದಿದೆ. ಪ್ರತಿ ವರ್ಷ ಶೇ 14ರಷ್ಟು ಹೆಚ್ಚಳವಾಗಿದೆ‌. 2015-16ನೇ ಸಾಲಿನಲ್ಲಿ 26,682 ಕೋಟಿ ಆದಾಯ ಕೇಂದ್ರ ಸರ್ಕಾರಕ್ಕೆ ಬಂದಿದೆ. ಅಷ್ಟೊಂದು ಕಾಳಜಿ ಇದ್ದರೆ ಮೊದಲು ಇದನ್ನು ನಿಲ್ಲಿಸಲಿ ಎಂದು ಕಿಡಿಕಾರಿದರು.

ಗೋವುಗಳಷ್ಟೇ ಅಲ್ಲ ಭೂಮಿ ಮೇಲಿರುವ 14ಲಕ್ಷ ಜೀವರಾಶಿಯಲ್ಲಿ ಯಾವ ಪ್ರಾಣಿಯ ಹತ್ಯೆಯೂ ಆಗಬಾರದು, ವೈಯಕ್ತಿಕವಾಗಿ ಪ್ರಾಣಿ ಹತ್ಯೆಗೆ ನಮ್ಮ ವಿರೋಧವಿದೆ ಎಂದ ಅವರು, ಅಮಿತ್ ಶಾ ಕರ್ನಾಟಕ ಪ್ರವಾಸದ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧಿಸುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಬಿಜೆಪಿ ಆಡಳಿತ ಇರುವ ಈಶಾನ್ಯ ರಾಜ್ಯಗಳು, ಗೋವಾ, ಮಹಾರಾಷ್ಟ್ರ, ಉತ್ತರ ಪ್ರದೇದಲ್ಲಿ ಏಕೆ ಗೋಹತ್ಯೆ ನಿಷೇಧಿಸಿಲ್ಲ ಎಂದು ಪ್ರಶಸ್ನಿಸಿದರು.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಈ ಕಂಪನಿಗಳಲ್ಲಿ ಬಿಜೆಪಿ ನಾಯಕರೇ ಪಾಲುದಾರರಾಗಿರುವ ಆರೋಪಗಳಿವೆ. ಅಮಿತ್ ಶಾ ಮತ್ತು ಆದಿತ್ಯನಾಥ ಮೊದಲು ಇದನ್ನು ತಡೆಯಲಿ ಎಂದರು.

 

By Suddi9

Leave a Reply

Your email address will not be published. Required fields are marked *