ಚೆನ್ನೈ: ಕಾರು ಹಾಗೂ ಲಾರಿ ನಡುವೆ ಮುಖಾ ಮುಖಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಕರ್ನಾಟಕ ಮೂಲದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಮಿಳುನಾಡಿನ ವಿರುದ್ಧ ನಗರ ಜಿಲ್ಲೆಯ ರಾಜಂಪಾಳ್ಯ ಬಳಿ ಶನಿವಾರ ನಡೆದಿದೆ.
ಮೃತರನ್ನು ಲಕ್ಷ್ಮಿ ನಾರಾಯಣ, ರತ್ನ, ಕಲಾವತಿ, ಶಂಕರೇಗೌಡ, ಶ್ರೀಧರ, ಕೀರ್ತಿಕಾ, ಮಗು ಪ್ರವೀಣ್ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಕರ್ನಾಟಕ ಮೂಲದ ಕುಟುಂಬ ಕಾರಿನಲ್ಲಿ ಕೇರಳಕ್ಕೆ ಪ್ರವಾಸ ತೆರಳಿದ್ದು, ವಾಪಾಸ್ಸಾಗುತ್ತಿದ್ದ ವೇಳೆ ತಮಿಳುನಾಡು ಸಮೀಪದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಚಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

