ಕೈಕಂಬ: ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ 21ನೇ ವರ್ಷದ ಮಕ್ಕಳ ಧ್ವನಿ-2014 ಮಕ್ಕಳ ಸಾಹಿತ್ಯ ಸಮ್ಮೇಳನ ಆ. 23 ಮತ್ತು 24ರಂದು ಕಟೀಲು ಪದವಿ ಪೂರ್ವ ಕಾಲೇಜಿನ ಶ್ರೀ ದುರ್ಗಾ ಸಭಾಭವನದಲ್ಲಿ ನಡೆಯಲಿದೆ.

kateel

 

 


ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಕಾಸರಗೋಡಿನ ಗಡಿನಾಡ ಪ್ರತಿಭೆ ಜಿ.ಎಚ್‌.ಎಸ್‌.ಎಸ್‌. ಪೈವಳಿಕೆ ನಗರದ ಪ್ಲಸ್‌ ವನ್‌ ವಿದ್ಯಾರ್ಥಿನಿ ಶ್ರದ್ಧಾ ಎನ್‌. ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ 2013ರಲ್ಲಿ ಪುಸ್ತಕ ಪ್ರಕಟಿಸಿದ ಪುಟಾಣಿಗಳಿಗೆ ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ ಗೌರವಧನ ನೀಡಲಾಗುವುದು. ಉದ್ಘಾಟನಾ ಸಮಾರಂಭದ ಅನಂತರ ಸಾಂಸ್ಕೃತಿಕ ವೈಭವ ನಡೆಯಲಿದೆ. ಭೋಜನ ವಿರಾಮದ ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ನಡೆಯುವುದು. ಸಂಜೆ ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಜರಗಲಿದೆ.

ಡಾ| ಯು.ಬಿ. ರಾಜಲಕ್ಷ್ಮೀ, ಡಾ| ಶರಭೇಂದ್ರ ಸ್ವಾಮಿ, ವೇ|ಮೂ| ವಾಸುದೇವ ಆಸ್ರಣ್ಣ, ವೇ|ಮೂ| ಕಮಲಾದೇವಿ ಪ್ರಸಾದ ಆಸ್ರಣ್ಣ, ವೇ|ಮೂ| ಹರಿನಾರಾಯಣ ಆಸ್ರಣ್ಣ ಮತ್ತು ಲೀಲಾವತಿ ಎಸ್‌. ರಾವ್‌ ಉಪಸ್ಥಿತರಿರುವರು. ಮರುದಿನ ಪೂರ್ವಾಹ್ನ ಅನುಕ್ರಮವಾಗಿ ಕವಿಗೋಷ್ಠಿ, ಕಥಾಗೋಷ್ಠಿ ಮತ್ತು ಅಭಿನಯಗೋಷ್ಠಿ ನಡೆಯುವುದು. 66 ಮಕ್ಕಳು ಇದರಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಅಪರಾಹ್ನ 2ರಿಂದ ಸಮಾರೋಪ ಸಮಾರಂಭ ನಡೆಯಲಿದೆ.

ಮಕ್ಕಳಿಗಾಗಿ ಬರೆದು ಪ್ರಕಟಿಸಿದ ಕಥಾಸಂಕಲನ ಕೃತಿಗಳಿಗೆ ಮತ್ತು ಅತ್ಯುತ್ತಮ ಶಾಲಾ ಸಂಚಿಕೆಗಳಿಗೆ ಬಹುಮಾನ ನೀಡಲಾಗುವುದು. ಮಕ್ಕಳ ಸಾಹಿತಿ ರಾಮ ಭಟ್‌ ಸಜಂಗದ್ದೆ ಅವರನ್ನು ಗೌರವಿಸಲಾಗುವುದು.

ಆ. 23ರಂದು ಪೂರ್ವಾಹ್ನ ಉದ್ಘಾಟನಾ ಸಮಾರಂಭದಲ್ಲಿ ನಿಂಗಯ್ಯ, ವೇ|ಮೂ| ಕೆ. ವಾಸುದೇವ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ವೇ|ಮೂ| ಲಕ್ಷ್ಮೀನಾರಾಯಣ ಆಸ್ರಣ್ಣ, ವೇ|ಮೂ| ವೆಂಕಟರಮಣ ಆಸ್ರಣ್ಣ, ವೇ|ಮೂ| ಅನಂತ ಪದ್ಮನಾಭ ಆಸ್ರಣ್ಣ, ಪ್ರದೀಪ್‌ ಕುಮಾರ್‌ ಕಲ್ಕೂರ, ನೀಲಾವರ ಸುರೇಂದ್ರ ಅಡಿಗ ಉಡುಪಿ, ಎಸ್‌.ವಿ. ಭಟ್‌ ಕಾಸರಗೋಡು, ಪ್ರೊ| ಜಯರಾಮ ಪೂಂಜ ಮತ್ತು ಬಿ. ಶ್ರೀನಿವಾಸ ರಾವ್‌ ಉಪಸ್ಥಿತರಿರುವರು.

By suddi9

Leave a Reply

Your email address will not be published. Required fields are marked *