ಸುದ್ದಿ9ಕೈಕಂಬ: ಮಂಗಳೂರು ವಿಮಾನ ನಿಲ್ದಾಣದ ರನ್ವೇ ಪಕ್ಕ ಬಂದಿದ್ದ ಭಾರೀ ಗಾತ್ರದ ಚಿರತೆ ಕಣ್ಮರೆಯಾಗಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣದ ಆವರಣ ಗೋಡೆ ಪಕ್ಕದಲ್ಲಿ ಚಿರತೆಯೊಂದು ಯಾನಿಗಳಿಗೆ ಕಾಣಸಿಕ್ಕಿದ್ದು ಭಾರೀ ಆಂದೋಲನವನ್ನು ಸೃಷ್ಟಿಸಿತ್ತು. ಬುಧವಾರದಿಂದ ಕಾದುಕುಳಿತ್ತಿದ್ದ ಮಂಗಳೂರಿನ ಭದ್ರತಾ ಅಧಿಕಾರಿಗಳು, ನಿನ್ನೆಯೂ ಒಂದು ಸುತ್ತು ರೌಂಡಪ್ ಹೊಡೆದು ನಿರ್ಗಮಿಸಿದ್ದಾರೆ. ಆದರೆ ಚಿರತೆ ಪತ್ತೆಯಾಗಿಲ್ಲ. ತನ್ನ ಹುಡುಕಾಟವನ್ನು ನಿಲ್ಲಿಸಿದ ಅಲ್ಲಿನ ಭದ್ರತಾ ಅಧಿಕಾರಿಗಳ ಆತಂಕ ಇನ್ನೂ ಕಡಿಮೆಯಾಗಿಲ್ಲ.

cirate
ಕಳೆದ ಎರಡು ವಾರಗಳ ಹಿಂದೆ ಅದ್ಯಪಾಡಿ-ಕೆಂಜಾರು ಪರಿಸರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಒಂದು ಕರು ಹಾಗೂ ಕೋಳಿಗಳನ್ನು ಕದ್ದೊಯ್ದು ತಿಂದು ಹಾಕಿತ್ತು. ಅಲ್ಲಿಂದ ಸುಮಾರು ಸಮಯ ಮಾಯವಾಗಿದ್ದ ಅದೇ ಚಿರತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಹುಲಿ ನರಭಕ್ಷಕವಾಗುವ ಮುಂಚೆ ಹೇಗಾದ್ರೂ ಮಾಡಿ ಹಿಡಿಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *