CM_Siddaramaiah_760x400

ಹೊಸದಿಲ್ಲಿ: ಮುಂಬರುವ 2019 ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ದೇಶದ  ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಇಲ್ಲಿನ  ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಂಗ್ರೆಸ್ 84 ನೇ ಮಹಾಧೀವೇಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಹುಲ್ ಗಾಂಧಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಭಾರೀ ಬಹುಮತದಿಂದ ಪಕ್ಷ  ಅಧಿಕಾರಕ್ಕೆ ಬರಲಿದ್ದು, ಲೋಕಸಭಾ ಚುನಾವಣೆಗೆ ಇದು ಮೆಟ್ಟಿಲಾಗಲಿದೆ ಎಂದರು.

ಸೋನಿಯಾ ಗಾಂಧಿ, ಡಾ. ಮನಮೋಹನಸಿಂಗ್ , ರಾಹುಲ್ ಗಾಂಧಿ ಮೊದಲಾದವರ   ಆಶೀರ್ವಾದದಿಂದ 2013 ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳಲ್ಲಿ ಶೇ. 90 ರಷ್ಟನ್ನು ತಮ್ಮಪಕ್ಷ ಈಡೇರಿಸಿದೆ  ಎಂದು ಸಿದ್ದರಾಮಯ್ಯ ಹೇಳಿದರು.

By suddi9

Leave a Reply

Your email address will not be published. Required fields are marked *