ಬಂಟ್ವಾಳ: ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಾಥಮಿಕ ಹಂತದ ಸಿದ್ಧತಾ ಸಭೆ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸಿಂಥೆಲ್ ಅಧ್ಯಕ್ಷತೆಯಲ್ಲಿ ಇಲ್ಲಿನ ಬಿ.ಸಿ.ರೋಡ್ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ಜಿಲ್ಲಾಧಿಕಾರಿ ಶಶಿಕಾಂತ್ ಸಿಂಥೆಲ್ , ಸೆಕ್ಟರ್ , ಪ್ಲೈಯಿಂಗ್ ಸ್ಕ್ವಾಡ್, ಸ್ಪಾಟಿಕ್ ಸರ್ವೆಯಲೆನ್ಸ್ ಟೀಂ, ವೀಡಿಯೊ ಸರ್ವಯಲೆನ್ಸ್ ಟೀಂ, ವೀಡಿಯೊ ವೀವಿಂಗ್ ಟೀಂ, ಮಾದರಿ ನೀತಿಸಂಹಿತೆ ಟೀಂ ಹಾಗೂ ಆಡಿಟಿಂಗ್ ಟೀಂ ಅಧಿಕಾರಿಗಳಿಗೆ ಮುಂದಿನ ಚುನಾವಣೆಯನ್ನು ಹೇಗೆ ಎದುಸರಿಬೇಕು, ಏನೆಲ್ಲಾ ಪೂರ್ವತಯಾರಿ ಮಾಡಿಕೊಳ್ಳಬೇಕು ಮತ್ತು ಯಾವ ರೀತಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತ ರೇಣುಕಾಪ್ರಸಾದ್ ಉಪಸ್ಥಿತರಿದ್ದರು.


