lord-hanuman-wallpapers-high-resolution-images-6

ಹನುಮನ ಮೂರ್ತಿ ಏಕೆ ಕೆಂಪಗಿದೆ: ಹನುಮನು ಸಿಂಧೂರವನ್ನು ಮೈತುಂಬಾ ಹಚ್ಚಿಕೊಂಡಿರುವುದರಿಂದ ಅವರ ಮೂರ್ತಿಯು ಕೆಂಪಗಿದೆ. ಇದರ ಹಿಂದೆ ಒಂದು ಕಾರಣ ಕೂಡ ಇದೆ. ಸೀತಾಮಾತೆಯು ತನ್ನ ಹಣೆಗೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಿರುವುದನ್ನು ಒಮ್ಮೆ ನೋಡಿದ ಹನುಮನು ದೇವಿಯನ್ನು ಇದೇಕೆ ಎಂದು ಕೇಳುತ್ತಾರೆ. ರಾಮನ ಮೇಲಿನ ಪ್ರೀತಿ ಮತ್ತು ಗೌರವ ಹಾಗೂ ಮಾಂಗಲ್ಯದ ಸಂಕೇತವಾಗಿ ಸಿಂಧೂರ ಇರುವುದರಿಂದ ಹಣೆಗೆ ಹಚ್ಚಿಕೊಳ್ಳುತ್ತಿರುವುದಾಗಿ ಆಕೆ ಹೇಳುತ್ತಾರೆ. ರಾಮ ಭಕ್ತ ಹನುಮಂತನು ತನ್ನ ಮೈ ತುಂಬಾ ಸಿಂಧೂರವನ್ನು ಬಳಿದುಕೊಂಡು ರಾಮನ ಮೇಲಿನ ಪ್ರೀತಿಯನ್ನು ಈ ಮೂಲಕ ತೋರಿಸುತ್ತಾರೆ. ಇದನ್ನರಿತ ರಾಮನು ಹನುಮನ ಭಕ್ತಿಗೆ ಮೆಚ್ಚಿ ಅವರಿಗೆ ವರವನ್ನು ನೀಡುತ್ತಾರೆ. ಯಾರು ಹನುಮನನ್ನು ಸಿಂಧೂರವನ್ನು ಹಚ್ಚಿ ಪೂಜಿಸುತ್ತಾರೋ ಅವರಿಗೆ ಯಾವುದೇ ಕಷ್ಟಗಳು ಇರುವುದಿಲ್ಲ ಮತ್ತು ಆ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ ಎಂದಾಗಿದೆ.

ಹನುಮನಿಗೆ ಒಬ್ಬ ಪುತ್ರರಿದ್ದಾರೆ?: ಲಂಕೆಯನ್ನು ದಹಿಸಿದ ನಂತರ ತನ್ನ ದೇಹವನ್ನು ತಂಪಾಗಿಸಲು ಹನುಮನು ಕೆರೆಗಿಳಿದು ದೇಹವನ್ನು ತಂಪು ಮಾಡಿ ಕೊಳ್ಳುತ್ತಾರೆ. ಅವರ ಬೆವರನ್ನು ನೀರಿನಲ್ಲಿರುವ ಮೀನುಗಳು ಸೇವಿಸುತ್ತವೆ. ಇದರಿಂದ ಅವುಗಳು ಮಕಧ್ವಜನಿಗೆ ಜನ್ಮ ನೀಡಲು ಕಾರಣವಾಗುತ್ತದೆ. ಹೀಗೆ ಬ್ರಹ್ಮಚಾರಿಯಾಗಿದ್ದು, ಕೂಡ ಹನುಮನು ಪುತ್ರನನ್ನು ಹೊಂದಿದ್ದಾರೆ.

ಹನುಮನಿಗೆ ಮರಣವನ್ನು ಆದೇಶಿಸಿದ ಶ್ರೀರಾಮ!:  ನಾರದರು ಒಮ್ಮೆ ಹನುಮನ್ನು ಸಮೀಪಿಸಿ ವಿಶ್ವಾಮಿತ್ರನನ್ನು ಬಿಟ್ಟು ಮತ್ತೆಲ್ಲಾ ಋಷಿಗಳನ್ನು ವಂದಿಸಲು ಹೇಳುತ್ತಾರೆ. ಏಕೆಂದರೆ ವಿಶ್ವಾಮಿತ್ರನು ಹಿಂದೆ ರಾಜನಾಗಿದ್ದು,  ನಂತರ ಋಷಿಯಾದವರು. ಹನುಮನು ನಾರದ ಮಾತನ್ನು ತಳ್ಳಿಹಾಕದೇ ಹಾಗೆಯೇ ನಡೆಯುತ್ತಾರೆ. ನಾರದರು ಈ ವಿಷಯವನ್ನು ವಿಶ್ವಾಮಿತ್ರರ ಗಮನಕ್ಕೆ ತರುತ್ತಾರೆ. ಇದನ್ನರಿತ ವಿಶ್ವಾಮಿತ್ರರು ರಾಮನಿಗೆ ಹನುಮಂತನಿಗೆ ಮರಣ ಶಿಕ್ಷೆಯನ್ನು ನೀಡಲು ಹೇಳುತ್ತಾರೆ. ಗುರುವಿನ ಮಾತನ್ನು ತಳ್ಳಿಹಾಕದ ರಾಮನು ಅಂತೆಯೇ ಬಾಣಗಳಿಂದ ಹನುಮಂತನು ಸಾಯಬೇಕೆಂದು ಆದೇಶಿಸುತ್ತಾರೆ. ತದನಂತರ ವಿಷಯವನ್ನರಿತ ನಾರದರು ವಿಶ್ವಾಮಿತ್ರರ ಬಳಿ ಸಾರಿ ನಡೆದ ವಿಚಾರವನ್ನು ತಿಳಿಸುತ್ತಾರೆ.

ಸೀತಾ ಮಾತೆಯ ಬಹುಮಾನವನ್ನು ತಿರಸ್ಕರಿಸಿದ ಹನುಮಂತ: ಒಂದು ದಿನ ಸೀತಾ ಮಾತೆಯು ಹನಮಂತನಿಗೆ ಬಿಳಿ ಮುತ್ತಿನ ಹಾರವನ್ನು ನೀಡುತ್ತಾರೆ. ಆದರೆ ಹಾರವು ರಾಮನ ಚಿತ್ರ ಅಥವಾ ಹೆಸರನ್ನು ಹೊಂದದೇ ಇರುವುದರಿಂದಾಗಿ ಹನುಮಂತನು ಅದನ್ನು ತಿರಸ್ಕರಿಸುತ್ತಾರೆ. ರಾಮನ ಮೇಲೆ ಹನುಮನ ಭಕ್ತಿ ಅದಮ್ಯವಾಗಿತ್ತು ಮತ್ತು ಅದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಇದನ್ನರಿತ ರಾಮನು ಹನುಮಂತನಿಗೆ ಉತ್ತಮ ಆರೋಗ್ಯವನ್ನು ಆಶೀರ್ವದಿಸುತ್ತಾರೆ.

ಹನುಮನಿಗೆ 108 ಹೆಸರುಗಳಿವೆ: ನಾವಿಲ್ಲಿ 108 ವಿಭಿನ್ನ ಭಾಷೆಗಳ ಬಗ್ಗೆ ಮಾತನಾಡುತ್ತಿಲ್ಲ. ಸಂಸ್ಕೃತ ಭಾಷೆಯಲ್ಲಿದೆಯೇ ಹನುಮಂತನು 108 ಹೆಸರುಗಳನ್ನು ಹೊಂದಿದ್ದಾರೆ. ಹನುಮಂತನು ತನ್ನ ಭಕ್ತರಿಗೆ ಎಷ್ಟು ಪ್ರಿಯರಾಗಿದ್ದಾರೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳಬಹುದಾಗಿದೆ.

 

By suddi9

Leave a Reply

Your email address will not be published. Required fields are marked *