ನೆಲಮಂಗಲ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ನೆಲಮಂಗಲ ಬಳಿ ಬುಧವಾರ ಮಧ್ಯಹ್ನ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ವರದಿಯಾಗಿದೆ.
ಕಂಟೇನರ್, ಕೆಎಸ್ಆರ್ ಟಿಸಿ ಬಸ್, ಎರಡು ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, ಕಂಟೇನರ್ ವಾಹನ ಚಾಲಕನ ಕುಡಿದ ಮತ್ತಿನಲ್ಲಿ ಅಜಾಗರುಕತೆಯಿಂದ ವಾಹನ ಚಲಾವಣೆ ಮಾಡಿದ್ದು, ಬಸ್ ಹಾಗೂ ಎರಡು ಕಾರುಗಳ ಮಧ್ಯೆ ಡಿಕ್ಕಿ ಹೊಡೆದಿದೆ.
ಸರಣಿ ಅಪಘಾತದಿಂದ ಹೆದ್ದರಿಯಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತಾಗಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಸಿದ್ದಾರೆ.

