ಹೊಸದಿಲ್ಲಿ : ಹಾದಿಯಾ-ಶಫಿನ್ ಜಹಾನ್ ಮದುವೆ ಅನೂರ್ಜಿತ ಎಂದು  ಕೇರಳ ಹೈಕೋರ್ಟ್  ನೀಡಿದ್ದ ತೀರ್ಪನ್ನು   ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು,  ಕಾನೂನು ಹೋರಾಟದಲ್ಲಿ ಹಾದಿಯಾ-ಶಫಿನ್ ಗೆದ್ದಿದ್ದಾರೆ.

ಹಾದಿಯಾಗೆ ತಮ್ಮ  ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ ಎಂದು ಈ ಹಿಂದೆಯೂ ಸುಪ್ರೀಂ ಕೋರ್ಟ್ ತಿಳಿಸಿತ್ತು.  ಹೆಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಹೈಕೋರ್ಟ್ ಮದುವೆಯನ್ನು ಅನೂರ್ಜಿತಗೊಳಿಸಬಾರದಿತ್ತು ಎಂದು ಸುಪ್ರಿಂ ಕೋರ್ಟ್ ಕಂಡುಕೊಂಡಿದೆ. ಆದರೆ ಇತರ ಆರೋಪಗಳಿಗೆ ಸಂಬಂಧಿಸಿ ಎನ್ ಐಎ ತನಿಖೆ ಮುಂದುವರಿಯಲಿದೆ.

ತನ್ನ ಸ್ವಂತ ಇಚ್ಛೆಯಿಂದ ಇಸ್ಲಾಂಗೆ ಮತಾಂತರವಾಗಿದ್ದಾಗಿ  ಹಾದಿಯಾ ನೀಡಿದ ಹೇಳಿಕೆಯ ಆಧಾರದಲ್ಲಿ ಈ ನಿರ್ಧಾಕ್ಕೆ ಬರಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

By Suddi9

Leave a Reply

Your email address will not be published. Required fields are marked *