IMG-20180305-WA0305-701x935

ಬೆಳಗಾವಿ: ಒಂದು ದಿನ ಕೆಲಸಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಕಾರ್ಮಿಕ ನೊಬ್ಬನ ಮೇಲೆ ಹೋಟೆಲ್ ಮಾಲೀಕನೇ ತೀವ್ರವಾಗಿ ಹಲ್ಲೆ ಮಾಡಿದ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ.

ಕಾಂಗ್ರೆಸ ಮುಖಂಡ ಮೊಹ್ಮದ ನಲಪಾಡ್ ಬೆಂಗಳೂರಿನ  ಹೊಟೇಲೊಂದರಲ್ಲಿ ಇದೇ ರೀತಿ ಹಲ್ಲೆ ಮಾಡಿದ ಘಟನೆ ಇನ್ನೂ ಹಚ್ಚ ಹಸರಾಗಿರುವಾಗಲೇ ಇತ್ತ ಚಿಕ್ಕೋಡಿ ಜಿಲ್ಲಾ ಬಿಜೆಪಿ  ಮಾಜಿ  ಅಧ್ಯಕ್ಷ, ಪಟ್ಟಣದ ಬಾಂಬೆ ರೆಸ್ಟೋರೆಂಟ್ ಮಾಲೀಕ ರಮೇಶರಾವ್ ಬಂಟೋಡಕರ್ ಹಲ್ಲೆ ನಡೆಸಿರುವುದು  ತೀವ್ರ  ಚರ್ಚೆಗೆ ಗ್ರಾಸವಾಗಿದೆ.

ಮಾಲೀಕನಿಂದ ತೀವ್ರ ಹಲ್ಲೆಗೆ ಒಳಗಾಗಿರುವ ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ತೇರದಾಳ ಗ್ರಾಮದ ರಮೇಶ  ಆಜೂರ (28) ಗೆ ಅಥಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ರಮೇಶ ಬಂಟೋಡಕರ ಮತ್ತು ಹನುಮಂತ, ಸತೀಶ್, ರಾವ್ ಸಾಬ್ ಎಂಬುವವರು ಕಬ್ಬಿಣದ ರಾಡಿನಿಂದ ಮನ ಬಂದಂತೆ ಥಳಿಸಸಿರುವುದುದಾಗಿ ಗಾಯಾಳು ರಮೇಶ .  ಅಥಣಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *