ಮಂಗಳೂರು: ರಾಜ್ಯದಲ್ಲಿ ಜನರಿಗೆ ರಕ್ಷೆ ನೀಡಲು ಮಾ.3ರಿಂದ 6ರವರೆಗೆ “ಜನಸುರಕ್ಷಾ ಯಾತ್ರೆ” ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅಂದು ಸರಕಾರಕ್ಕೆ ಮತ್ತು ಹಂತಕರಿಗೆ ಎಚ್ಚರಿಕೆ ನೀಡಲು ಉತ್ತರಕನ್ನಡದಲ್ಲಿ ಪ್ರಕಾಶ್ ಜಾವ್ಡೇಕರ್ ಜನಸುರಕ್ಷಾ ಯಾತ್ರೆಗೆ ಚಾಲನೆ ನೀಡಲಿದ್ದು, ಕುಶಾಲನಗರದಿಂದ ಈ ಯಾತ್ರೆ ಪ್ರಾರಂಭಗೊಂಡು ಅಂಕೋಲ ಮೂಲಕ ಮಂಗಳೂರಲ್ಲಿ ಸಮಾಪನಗೊಳ್ಳಲಿದೆ. ಮಾ. 6ರಂದು ಎರಡು ಕಡೆ ಪಾದಯಾತ್ರೆ ನಡೆಯುವ ಮೂಲಕ ಮಂಗಳೂರು ಚಲೋ ನಡೆಯಲಿದೆ ಎಂದು ವಿವರಿಸಿದರು.
ಮಾ.6ರಂದು ಕದ್ರಿ ಮಂಜುನಾಥೇಶ್ವರ ಕ್ಷೇತ್ರದಿಂದ ಹಾಗೂ ಪಂಪ್ ವೆಲ್ ನಿಂದ ಪಾದಯಾತ್ರೆ ನಡೆಯಲಿದೆ. ಕೊನೆಗೆ ಜ್ಯೋತಿಯಿಂದ ನೆಹರೂ ಮೈದಾನದವರೆಗೆ ಪಾದಯಾತ್ರೆ ಕೈಗೊಳಲಿದ್ದೇವೆ ಎಂದವರು, ಸಮಾರೋಪ ಸಮಾರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾರೋಪ ಭಾಷಣ ಮಾಡಲಿದ್ದು, ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸದಾನಂದ ಗೌಡ, ಪ್ರತಾಪಸಿಂಹ ಮತ್ತಿತರ ಬಿಜೆಪಿ ಮುಖಂಡರ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

