ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಏಪ್ರಿಲ್/ಮೇ ತಿಂಗಳಲ್ಲಿ ನಡೆಸಿದ ಅಂತಿಮ ವರ್ಷದ ಬಿ.ಎಸ್ಸಿ (ಅನಿಮೇಶನ್ ಅಂಡ್ ವಿಶುವಲ್ ಎಫೆಕ್ಟ್) ಪರೀಕ್ಷೆಯಲ್ಲಿ ಕಳೆದ ವರ್ಷಗಳಂತೆ ಈ ಬಾರಿಯೂ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ರ್ಯಾಂಕ್‍ಗಳು ಮಂಗಳೂರಿನ ಕೊಡಿಯಾಲಬೈಲಿನಲ್ಲಿರುವ ಶಾರದಾ ಕಾಲೇಜಿಗೆ ದೊರೆತಿದೆ.
ಪ್ರಭಾತ್ ಕೆ. ಪ್ರಥಮ (3,734 ಅಂಕಗಳು), ಸೌರಭ್ ಯು. ಆಚಾರ್ಯ ದ್ವಿತೀಯ (3,611 ಅಂಕಗಳು) ಹಾಗೂ ರೋಹಿತಾಶ್ವ ಎನ್. ತೃತೀಯ (3,597 ಅಂಕಗಳು) ರ್ಯಾಂಕ್‍ಗಳನ್ನು ಪಡೆದಿರುತ್ತಾರೆ. ಶಾರದಾ ಕಾಲೇಜು ನಿರಂತರವಾಗಿ ಎಲ್ಲಾ ಕೋರ್ಸುಗಳ ಅಂತಿಮ ವರ್ಷದಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಿದ್ದು, ದೇಶದ ಮೂಲೆಮೂಲೆಯ ವಿದ್ಯಾರ್ಥಿಗಳನ್ನು ತನ್ನೆಡೆಗೆ ಆಕರ್ಷಿಸಿರುವುದು ಮಾತ್ರವಲ್ಲದೆ, ವೈಶಿಷ್ಟ್ಯಪೂರ್ಣ ಶಿಸ್ತುಬದ್ಧ ಶಿಕ್ಷಣಕ್ಕೆ ಸಾಮಾಜಿಕ ಮನ್ನಣೆಯನ್ನು ಪಡೆದಿದೆ. ರ್ಯಾಂಕ್ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದಿಸಿರುತ್ತಾರೆ.

