ಬೆಳ್ತಂಗಡಿ: ಅಕ್ರಮವಾಗಿ ಗೂಬೆ ಸಾಗಿಸುತ್ತಿದ್ದವರನ್ನು ಪೊಲೀಸರು ತಾಲೂಕಿನ ನಿಟ್ಟಡೆ ಗ್ರಾಮದ ಕುಂಭ ಶ್ರೀ ಶಾಲೆಯ ಎದುರು ಬಂಧಿಸುವಲ್ಲಿ ಸೋಮವಾರ ರಾತ್ರಿ ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಬಜಪೆ ನಿವಾಸಿ ಜೊಸೇಫ್ ಸುನೀಲ್ ರೊಡ್ರಿಗಸ್, ಉ.ಕ. ಜಿಲ್ಲೆಯ ಕೃಷ್ಣಮೂರ್ತಿ, ಉಡುಪಿಯ ಜಿಲ್ಲೆಯ ಅಂಬಲಪಾಡಿಯ ಪ್ರಶಾಂತ್.ಕೆ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ವಾಹನದಲ್ಲಿ ಗೂಬೆ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪುತ್ತೂರು ಅರಣ್ಯ ಸಂಚಾರಿ ಘಟಕದ ಪಿಎಸ್ಐ ಸುಂದರ್ ಪೂಜಾರಿ ನೇರಥ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಬಂಧಿತರಿಂದ 2.5 ಲಕ್ಷ ರೂ. ಮೌಲ್ಯದ ಬೊಲೋರೊ ವಾಹನ ಹಾಗೂ ಸುಮಾರು 2 ಲಕ್ಷ ಮೌಲ್ಯದ ಗೂಬೆಯನ್ನು ವಶಕ್ಕೆ ಪಡೆದಿದ್ದಾರೆ.

