ಮಂಗಳೂರು: ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯಲ್ಲಿ 2.20 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳವ ರಸ್ತೆ ಕಾಂಕ್ರೀಟಿಕರಣ ಹಾಗೂ ಪಚ್ಚನಾಡಿ ಸೇತುವೆ ನಿರ್ಮಾಣಕ್ಕೆ ಮೇಯರ್ ಕವಿತಾ ಸನಿಲ್ ಹಾಗೂ ಶಾಸಕ ಮೊಹಿದ್ದೀನ್ ಬಾವ ಶಿಲಾನ್ಯಾಸ ಮಂಗಳವಾರ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಕಮಿಷನರ್ ಮೊಹಮ್ಮದ್ ನಝೀರ್, ಉಪ ಮೇಯರ್ ರಾಜನೀಶ್, ಕಾರ್ಪೊರೇಟರ್ ಸಬಿತಾ ಮಿಸ್ಕಿತ್, ಶಶಿಧರ್ ಹೆಗ್ಡೆ ಇತರರು ಉಪಸ್ಥಿತರಿದ್ದರು.
