ದಿಲ್ಲಿ: ದೇಶದೆಲ್ಲೆಡೆ ಗ್ರಾಹಕರ ಮನ ಗೆದ್ದಿರುವ ಜಿಯೋ, ಇದೀಗ ತನ್ನ ಗ್ರಾಹಕರಿಗೆ ಸೇವೆ ನೀಡುತ್ತಿದ್ದ ಜಿಯೋ ಮನಿ ಮೊಬೈಲ್ ವಾಲೆಟ್ ಸೇವೆಯನ್ನು ಸ್ಥಗಿತಗೊಳಿಸಿ ಶಾಕಿಂಕ್ ಸುದ್ದಿ ನೀಡಿದೆ.
ಫೆ.27ರ ಬಳಿಕ ಜಿಯೋ ಮನಿ ಮೊಬೈಲ್ ವಾಲೆಟ್ ಸೇವೆ ಅಲಭ್ಯವಾಗಲಿದ್ದು, ಆರ್ ಬಿಐ ನಿರ್ದೇಶನದ ಬಳಿಕ ಮೊಬೈಲ್ ಹಣವನ್ನು ವರ್ಗಾವಣೆ ಮಾಡುವ ಸೌಲಭ್ಯವನ್ನು ನಿಷೇಧಿಸಲಾಗುವುದು ಎಂದು ಕಂಪೆನಿ ಸ್ಪಷ್ಟಪಡಿಸಿದೆ.
ಇನ್ನು ಬಗ್ಗೆ ಗ್ರಾಹಕರಿಗೆ ಸಂದೇಶಗಳನ್ನು ಕೂಡ ರವಾನೆ ಮಾಡಲಾಗಿದ್ದು, ಗ್ರಾಹಕರು ಫೆ. 26 ರವರೆಗೆ ಹಣವನ್ನು ವರ್ಗಾಯಿಸಬಹುದು ಎಂದು ಕಂಪೆನಿ ಕೋರಿದೆ.

