ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ 94 ಚ ಯೋಜನೆಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಯ ಕಾರ್ಯಕ್ರಮವನ್ನು ಗುರುವಾರ ಬೆಳಗ್ಗೆ 10 ಗಂಟೆಗೆ ನಿಗದಿಪಡಿಸಿದ್ದು. ಅದರಂತೆ ಫಲಾನುಭವಿಗಳು , ಜನಪ್ರತಿನಿಧಿಗಳು ಸಭಾಂಗಣದಲ್ಲಿ ಬಂದು ಸೇರಿದ್ದರು. ಮಧಯಾಹ್ನ 12 ಗಂಟೆಯಾದರು ಶಾಸಕರು ಬರದ ಕಾರಣ ಸಹನೆ ಕಳೆದುಕೊಂಡ ಬಿಜೆಪಿ ಕಾರ್ಯಕರ್ತರು ಕೆಲವು ಫಲಾನುಭವಿಗಳು ಹಕ್ಕುಪತ್ರ ನೀಡುವಂತೆ ಗದ್ದಲವೆಬ್ಬಿಸಿದರು. ಈ ಸಂಧರ್ಭ ಬಿಜೆಪಿ ಮತ್ತು ಕಾಂಗ್ರೇಸ್ ಕಾರ್ಯಕರ್ತರ ನಡುವೆ ಮಾತಿನ ಜಟಾಪಟಿ ನಡೆಯಿತು. ಹಕ್ಕುಪತ್ರವನ್ನು ಆರ್ ಐ ಅವರಲ್ಲಿ ನೀಡುವಂತೆ ಒತ್ತಾಯಿಸಿದರು.
ಶಾಸಕರ ಆಗಮನ
12.45 ಕ್ಕೆ ಆಗಮಿಸಿದ ಶಾಸಕ ಮೋಹಿದ್ದೀನ್ ಬಾವ ಅವರು ನೇರ ವೇದಿಕೆಗೆ ತೆರಳಿ ಭಾಷಣ ಆರಂಭಿಸಿದರು ಇದರಿಂದ ಕೋಪಗೊಂಡ ಬಿಜೆಪಿ ಕಾರ್ಯಕರ್ತರು ವೇದಿಕೆಯತ್ತ ತೆರಳಿ ನಮಗೆ ನಿಮ್ಮ ಭಾಷಣ ಬೇಡ ಹಕ್ಕು ಪತ್ರ ನೀಡಿ ಎಂದು ಅಗ್ರಹಿಸಿದರು. ಬಿ.ಜೆ.ಪಿ.ಹಾಗೂ ಕಾಂಗ್ರೆಸ್ ನಡುವೆ ಚಕಾಮಕಿ ಗೊಂದಲ ವಾತವರಣ ಉಂಟಾಯಿತು. ಮಧ್ಯ ಪ್ರವೇಶಿದ ಕೆ.ಪಿ,ಸಿ,ಸಿ. ಸದಸ್ಯ ಆರ್.ಕೆ ಪ್ರಥ್ತಿರಾಜ್ ಭಾಷಣ ಮುಂದುವರಿಸಲು ಅನುವು ಮಾಡಿ ಕೊಟ್ಟರು.
180 ಹಕ್ಕು ಪತ್ರಗಳನ್ನು 15 ಅನಿಲ ಭಾಗ್ಯ ಯೋಜನೆಯ ಮಂಜೂರಾತಿ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಜಿ.ಪಂ.ಜನಾರ್ಧನ ಗೌಡ, ತಾ.ಪಂ.ಉಪಾಧ್ಯಕ್ಷೆ ಪೂರ್ಣಿಮ ಗಣೇಶ್, ತಾ.ಪಂ.ಸದಸ್ಯೆ ವಿಜಯಾಲಕ್ಷ್ಮೀ ಪ್ರಕಾಶ್, ಮುತ್ತೂರು ಗ್ರಾ.ಪಂ.ಅಧ್ಯಕ್ಷ ನಾಗೇಶ್ ಶೆಟ್ಟಿ, ಎಡಪದವು ಅಧ್ಯೆಕ್ಷೆ ಮಾಲತಿ, ಉಪಾಧ್ಯಕ್ಷ ಗಂಗಾಧರ, ಎಪಿಎಮ್ಸಿ ಸದಸ್ಯ ರುಕ್ಮಾಯ ನಾಯಕ್, ಮೆಸ್ಕಾ ನಿರ್ದೇಶಕ ಸುರೇಂದ್ರ ಕಂಬಳಿ, ಪಿ.ಡಿ.ಒ. ಗೋಗ ಮಲ್ಲಣ್ಣ ಉಪಸ್ಥಿತರಿದ್ದರು. ಪಂಚಾಯತ್ ಹೊರಗಡೆ ಸೀರೆ ಹಂಚಲು ಮುಂದಾದಾಗ ಬಿ.ಜಿ.ಪಿ ಕಾರ್ಯಕರ್ತರು ಅಕ್ಷೇಪ ವ್ಯಕ್ತಪಡಿಸಿ ಮಾತಿನ ನಡೆಯಿತು. 


